ಈದ್ಗಾ ಮೈದಾನ ವಿವಾದದ ನಂತರ ಎಸ್ಪಿ ಮಿಥುನ್‌ಕುಮಾರ್ ಅವರು ಎಲ್ಲ ಇನ್‌ಸ್ಪೆಕ್ಟರ್ ಹಾಗೂ ಸಬ್ ಇನ್‌ಸ್ಪೆಕ್ಟರ್ ಗಳ ಸಭೆ ನಡೆಸಿದ್ದರು. ಸದರಿ ಸಭೆಗೆ ಸಕಾರಣವಿಲ್ಲದೆ ಚಂದ್ರಕಲಾ ಅವರು ಗೈರು ಹಾಜರಾಗಿದ್ದರು ಎನ್ನಲಾಗಿದೆ. ಅವರ ಕರ್ತವ್ಯ ನಿರ್ವಹಣೆ ಕುರಿತಂತೆ ಕೆಲ ದೂರುಗಳು ಕೇಳಿಬಂದಿದ್ದವು. ಈ ಕುರಿತಂತೆ ಚಂದ್ರಕಲಾರವರ ವಿರುದ್ಧ ಶಿಸ್ತುಕ್ರಮ ಜರುಗಿಸುವಂತೆ ಪೂರ್ವ ವಲಯ ಐಜಿಪಿಗೆ, ಎಸ್ಪಿ ವರದಿ ಕಳುಹಿಸಿದ್ದರು. ಇದರ ಆಧಾರದ ಮೇಲೆ ಚಂದ್ರಕಲಾ ಅವರನ್ನು ಅಮಾನತುಗೊಳಿಸಿ ಐಜಿಪಿ ಆದೇಶಿಸಿದ್ದಾರೆ ಎಂದು ತಿಳಿದುಬಂದಿದೆ.
