ಹುಬ್ಬಳ್ಳಿ – ಧಾರವಾಡದಲ್ಲಿ ಪೊಲೀಸರ ಹಾಗೂ ಪತ್ರಕರ್ತರ ನಡುವೆ ಡೀಲ್..!
ಹುಬ್ಬಳ್ಳಿ – ಧಾರವಾಡದಲ್ಲಿ ಒಂದಲ್ಲಾ ಒಂದು ಘಟನೆಗಳು ಸದ್ದು ಮಾಡುತ್ತಿರುತ್ತವೆ, ಕೆಲವೊಂದು ಪ್ರಕರಣಗಳು ಮಾಸಿ ಹೋಗುವ ಮುನ್ನ ಛೋಟಾ ಮುಂಬೈನಲ್ಲಿ ಮತ್ತೊಂದು ಪ್ರಕರಣ ಕೇಳಿ ಬಂದಿದ್ದು, ಕೆಲವೊಂದಿಷ್ಟು ಪೊಲೀಸ್ ಅಧಿಕಾರಿಗಳನ್ನು ಇಟ್ಟುಕೊಂಡು ದೊಡ್ಡ ದೊಡ್ಡ ಚಾನಲ್ ಗಳನ್ನು ಹೇಳಿಕೊಂಡು ಡೀಲಿಗಿಳಿದ ಪ್ರಕರಣ ಕೇಳಿ ಬಂದಿದೆ.
ವಿಡಿಯೋ ಆಡಿಯೋ ಸಮೇತ ಹುಬ್ಬಳ್ಳಿ ಕೆಲವೊಂದಿಷ್ಟು ಪತ್ರಕರ್ತರ ಕರಾಬ್ ಕಹಾನಿ..
ಹೌದು..ಸಮಾಜವನ್ನು ಕಾಪಾಡಬೇಕಾದುದು ಪೊಲೀಸರ ಹಾಗೂ ಪತ್ರಕರ್ತರ ಕೆಲಸ, ಇದೀಗ ಆ ಕೆಲಸಕ್ಕೆ ಈ ಎರಡು ಕಣ್ಣುಗಳು ಮಸಿ ಬಳೆದಂತಾಗಿದೆ. ಹುಬ್ಬಳ್ಳಿ ಧಾರವಾಡದಲ್ಲಿ ಸಾಕಷ್ಟು ಅಕ್ರಮ ಚಟುವಟಿಕೆಗಳು ನಡೆದಿದ್ದು, ಇದೀಗ ಆ ಚಟುವಟಿಕೆಯಲ್ಲಿ ಕೆಲವೊಂದಿಷ್ಟು ಪೊಲೀಸರು ಹಾಗೂ ಕೆಲವೊಬ್ಬರು ಪತ್ರಕರ್ತರು ಭಾಗಿಯಾಗಿರುವುದು ವಿಷಾದನೀಯ. ಈಗಲಾದರೂ ಈ ಅಧಿಕಾರಿಗಳ ಮೇಲಿನ ಅಧಿಕಾರಿಗಳು ಇವರ ವಿರುದ್ಧ ಕಠಿಣ ಕ್ರಮ ತೆಗೆದುಕೊಳ್ಳುತ್ತಾರಾ ಎಂಬುದನ್ನು ಕಾದು ನೋಡಬೇಕಾಗಿದೆ.
bigtvnews | Hubli Dharwad News | Kannada News | Karnataka News Hubli News | News In Hubli | Local news

