ಮನೆಯಲ್ಲಿ ಗುರು ಹಿರಿಯರು ತಮ್ಮ ಇಬ್ಬರೂ ಪುತ್ರಿಯರಿಗೆ ಮದುವೆ ನಿಶ್ಚಯಿಸಿದ್ದರು. ಎಲ್ಲವೂ ಅಂದುಕೊಂಡಂತೆ ಆಗಿದ್ದರೆ ಇಬ್ಬರೂ ಸಹೋದರಿಯರು ಗುರು ಹಿರಿಯರು ನೋಡಿದ್ದ ವರರೊಂದಿಗೆ ಮದುವೆ ಆಗಬೇಕಿತ್ತು. ವರರು ಇವರಿಗಿಂತ ವಯಸ್ಸಿನಲ್ಲಿ ದೊಡ್ಡವರಾಗಿದ್ದು, ಇವರಿಬ್ಬರಿಗೂ ಬೇರೆ ಯುವಕರ ಜೊತೆಗೆ ಪ್ರೇಮವಿತ್ತು. ಹೀಗಾಗಿ ಈ ಮದುವೆ ಇಬ್ಬರಿಗೂ ಇಷ್ಟವಿರಲಿಲ್ಲ. ಈ ಕಾರಣದಿಂದಾಗಿ ವಿವಾಹಕ್ಕೆ ಎಂಟು ದಿನ ಇರುವಾಗಲೇ ಇಬ್ಬರೂ ಪರಾರಿಯಾಗಿದ್ದಾರೆ. ಕುಟುಂಬಸ್ಥರು ಇಬ್ಬರೂ ನಾಪತ್ತೆಯಾಗಿರುವ ಬಗ್ಗೆ ಪೊಲೀಸ್ ಠಾಣೆಯಲ್ಲಿ ದೂರು ನೀಡಿದ್ದಾರೆ.ಪ್ರಕರಣ ದಾಖಲಿಸಿಕೊಂಡ ಪೊಲೀಸರು ಸಂಭಾಲ್ ಜಿಲ್ಲೆಯಲ್ಲಿ ನಾಪತ್ತೆಯಾಗಿದ್ದ ಇಬ್ಬರೂ ಸಹೋದರಿಯರನ್ನು ಪತ್ತೆ ಹಚ್ಚುವಲ್ಲಿ ಯಶಸ್ವಿಯಾಗಿದ್ದಾರೆ. ಈ ವೇಳೆ ಅವರೊಂದಿಗೆ ಇಬ್ಬರೂ ಯುವಕರನ್ನು ವಶಕ್ಕೆ ಪಡೆದುಕೊಂಡಿದ್ದು, ತನಿಖೆ ನಡೆಸಿದ ವೇಳೆ ಈ ಯುವತಿಯರು ತಮ್ಮ ಸೋದರ ಸಂಬಂಧಿಯ ಸಹೋದರರನ್ನು ಮದುವೆಯಾಗಿದ್ದಾರೆ ಎನ್ನುವುದು ವಿಚಾರ ತಿಳಿದು ಬಂದಿದೆ.
