Breaking News

ತಾಯಿಯ ವಿರುದ್ಧ ಸಾಕ್ಷಿ ಹೇಳಿದ್ದಕ್ಕೆ ಆಕೆಯ ಕುಟುಂಬಸ್ಥರು ನಿಂದಿಸಿದ್ದರಿಂದ ನೊಂದ ಪುತ್ರ ವಿಷ ಸೇವಿಸಿ ಆತ್ಮಹತ್ಯೆ!!

ಕೌಟುಂಬಿಕ ಕಲಹದಿಂದ ಅಶ್ವಿ‌ನಿ 4 ವರ್ಷಗಳ ಹಿಂದೆಯೇ ತವರಿಗೆ ತೆರಳಿದ್ದಾಳೆ. ದಂಪತಿಯ ವಿಚ್ಛೇದನ ಪ್ರಕರಣದ ವಿಚಾರಣೆ ವೇಳೆ ಹಿರಿಯ ಪುತ್ರ ಬಸವರಾಜ ಸಹಿತ ಮೂವರು ಮಕ್ಕಳು ತಂದೆ ಪರ ಹಾಗೂ ತಾಯಿ ವಿರುದ್ಧ ಸಾಕ್ಷಿ ಹೇಳಿದ್ದಾರೆ. ಧಾರ್ಮಿಕ ಕಾರ್ಯಕ್ರಮದ ಹಿನ್ನೆಲೆಯಲ್ಲಿ ತಾಯಿ ಮನೆಗೆ ತೆರಳಿದ್ದಾಗ ಅಲ್ಲಿ ನಿಂದಿಸಿದ್ದರಿಂದ ಬಸವರಾಜ ವಿಷ ಸೇವಿಸಿ ಆತ್ಮಹತ್ಯೆ ಮಾಡಿಕೊಂಡಿದ್ದಾನೆ. ಗುತ್ತಲ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.ಬಸವರಾಜ ಕರಿಯಪ್ಪ ಚಿಟಗಿ ಆತ್ಮಹತ್ಯೆ ಮಾಡಿಕೊಂಡವನು. ತಾಲೂಕಿನ ತೆರೆದಹಳ್ಳಿ ಗ್ರಾಮದ ಕರಿಯಪ್ಪ ಚಿಟಗಿ ಅವರು ಅಶ್ವಿ‌ನಿ ಜತೆಗೆ ವಿವಾಹವಾಗಿದ್ದರು. ದಂಪತಿಗೆ ಬಸವರಾಜ ಸಹಿತ ಮೂವರು ಮಕ್ಕಳಿದ್ದಾರೆ.

Share News

About BigTv News

Check Also

ಬೆಂಗಳೂರು | ಸಿಕ್ಕವರ ಮೇಲೆ ಮಚ್ಚು ಬೀಸಿದ ದುಷ್ಕರ್ಮಿಗಳು: ಎಂಟು ಮಂದಿಗೆ ಗಾಯ

ಬೆಂಗಳೂರು: ಮಾಸ್ಕ್ ಧರಿಸಿ ನಾಲ್ಕು ಬೈಕ್‌ಗಳಲ್ಲಿ ಬಂದಿದ್ದ ಎಂಟು ಮಂದಿ ದುಷ್ಕರ್ಮಿಗಳು ಉತ್ತರಹಳ್ಳಿ ಮುಖ್ಯರಸ್ತೆ ಹಾಗೂ ಅರಹಳ್ಳಿ ಗೇಟ್ ಬಳಿ …

Leave a Reply

Your email address will not be published. Required fields are marked *