Breaking News

ವಿಕೃತಕಾಮಿ ಕಾರ್ತಿಕ ಬಂಧನದಿಂದ ನಿಟ್ಟುಸಿರು ಬಿಟ್ಟ ಏರಿಯಾ ಮಹಿಳೆಯರು!!

ಬೆಂಗಳೂರಿನಲ್ಲಿ ನೆಲೆಸಿದ್ದ ವಿಕೃತ ಕಾಮಿಯ ಹೆಸರು ಕಾರ್ತಿಕ್. ಸಿಲಿಕಾನ್ ಸಿಟಿಯ ಅತ್ಯಂತ ಜನಸಂದಣಿ ಹಾಗೂ ಬಹುತೇಕ ಯುವಜನರೇ ಹೆಚ್ಚಾಗಿ ಓಡಾಡುವಂತಹ ಕ್ವೀನ್ಸ್ ರಸ್ತೆಯಲ್ಲಿರುವ ರಾಜೀವ್ ಗಾಂಧಿ ಕಾಲೋನಿ ನಿವಾಸಿ.ಎದುರು ಮನೆಯ ಮಹಿಳೆ ಊಟ ಮುಗಿಸಿ ಮಲಗಲು ಎರಡನೇ ಮಹಡಿಗೆ ಹೋಗುತ್ತಿದ್ದರು. ಈ ವೇಳೆ ತನ್ನ ಮನೆಯಿಂದ ಆರೋಪಿ ಕಾರ್ತಿಕ್ ಪ್ಯಾಂಟ್ ಬಿಚ್ಚಿ ಖಾಸಗಿ ಅಂಗ ತೋರಿಸಿ ವಿಕೃತಿ ಮೆರೆದ್ದಾನೆ.ಜನರು ವಿರೋಧ ಮಾಡಿದರೂ ಅವರೆಲ್ಲರ ಮೇಲೆ ಮನೆಯಲ್ಲಿದ್ದ ಹಾಲೋಬ್ಲಾಕ್ ಕಲ್ಲುಗಳು, ಹೂವಿನ ಕುಂಡಗಳನ್ನು ಎತ್ತಿ ಬೀಸಾಡಿ ಗಾಯಗೊಳಿಸಿದ್ದಾನೆ. ಜೊತೆಗೆ, ಮಚ್ಚು ಹಿಡಿದು ಬೀಸುತ್ತಾ, ಕಿಟಕಿ ಗಾಜು ಎತ್ತಿ ಹಾಕಿ ಹಲ್ಲೆ ಮಾಡಿದ್ದಾನೆ. ಇಷ್ಟಕ್ಕೆ ನಿಲ್ಲದ ಇವನ ಪುಂಡಾಟ ಅಲ್ಲ ಜಗಳ ಬಿಡಿಸಲು ಬಂದ ತನ್ನ ತಾಯಿಯನ್ನೂ ಹೊಡೆದು ಗಾಯಗೊಳಿಸಿದ್ದಾನೆ. ಇದೀಗ ಸ್ಥಳೀಯ ವ್ಯಕ್ತಿ ರವೀಂದ್ರ ಹಾಗೂ ಆರೋಪಿ ಕಾರ್ತಿಕ್ ತಾಯಿ‌ ಇಬ್ಬರು ಖಾಸಗಿ ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆಯುತ್ತಿದ್ದಾರೆ.ಕುರಿತು ಪ್ರಕರಣ ದಾಖಲಿಸಿಕೊಂಡ ಶಿವಾಜಿನಗರ ಪೊಲೀಸರು ಆರೋಪಿಯನ್ನ ಬಂಧಿಸಿ ವಿಚಾರಣೆ ನಡೆಸಿದ್ದಾರೆ. ಈ ವೇಳೆ ಕಾರ್ತಿಕ್ ಗೆ ತನ್ನ ಪ್ಯಾಂಟ್ ಬಿಚ್ಚಿ ಖಾಸಗಿ ಅಂಗವನ್ನು ಮಹಿಳೆಯರಿಗೆ ತೋರಿಸಿದ್ದನ್ನು ಒಪ್ಪಿಕೊಂಡಿದ್ದಾನೆ. ಸದ್ಯ ಈತನ ಬಂಧನದಿಂದ ಏರಿಯಾ ಮಹಿಳೆಯರು ನಿಟ್ಟುಸಿರು ಬಿಟ್ಟಿದ್ದಾರೆ

Share News

About BigTv News

Check Also

ಸರಗಳ್ಳತನ ಮಾಡುತ್ತಿದ್ದ ಅಪ್ರಾಪ್ತ ಸೇರಿ ಇಬ್ಬರು ಆರೋಪಿಗಳ ಬಂಧನ

ಬೆಂಗಳೂರು: ಅಪ್ರಾಪ್ತ ಬಾಲಕನೊಂದಿಗೆ ಸೇರಿ ಮಹಿಳೆಯರ ಚಿನ್ನದ ಮಾಂಗಲ್ಯ ಸರ ಕಳವು ಮಾಡುತ್ತಿದ್ದ ಇಬ್ಬರು ಆರೋಪಿಗಳನ್ನು ಬಂಡೇಪಾಳ್ಯ ಪೊಲೀಸರು ವಶಕ್ಕೆ …

Leave a Reply

Your email address will not be published. Required fields are marked *