Breaking News

ಪೊಲೀಸ್ ಠಾಣೆಯಲ್ಲಿ ಗಲಾಟೆ ಮಾಡಿದ್ದಕ್ಕಾಗಿ ನಟ ವಿನಾಯಕನ್ ಬಂಧನ…….

ರಜನಿಕಾಂತ್ ಅಭಿನಯದ ಜೈಲರ್ ಸಿನೆಮಾದಲ್ಲಿ ಮನೋಜ್ಞ ಅಭಿನಯ ಮಾಡಿ ಎಲ್ಲರ ಮನಗೆದ್ದಿದ್ದ ಚಿತ್ರದ ಖಳನಾಯಕ ವಿನಾಯಕನ್ ಇದೀಗ ನಿಜ ಜೀವನದಲ್ಲಿ ಖಳನಾಯಕನಾಗಲು ಹೋಗಿ ಅರೆಸ್ಟ್ ಆದ ಘಟನೆ ನಡೆದಿದೆ. ರಜನಿಕಾಂತ್ ಅಭಿನಯದ ‘ಜೈಲರ್’ ಚಿತ್ರದಲ್ಲಿ ಖಳನಾಯಕನಾಗಿ ನಟಿಸಿದ್ದ ನಟ ವಿನಾಯಕನ್ ಅವರನ್ನು ಎರ್ನಾಕುಲಂ ಉತ್ತರ ಪೊಲೀಸರು ಮಂಗಳವಾರ ಠಾಣೆಯಲ್ಲಿ ಗದ್ದಲ ಸೃಷ್ಟಿಸಿದ ಆರೋಪದ ಮೇಲೆ ಬಂಧಿಸಿದ್ದಾರೆ.
ಅವರನ್ನು ಎರ್ನಾಕುಲಂ ಜನರಲ್ ಆಸ್ಪತ್ರೆಗೆ ಕರೆದೊಯ್ಯಲಾಗಿದ್ದು, ವೈದ್ಯಕೀಯ ಪರೀಕ್ಷೆ ಪೂರ್ಣಗೊಂಡಿದೆ ಎಂದು ಪೊಲೀಸ್ ಮೂಲಗಳು ತಿಳಿಸಿವೆ. ಅವರು ವಾಸವಾಗಿರುವ ಅಪಾರ್ಟ್‌ಮೆಂಟ್‌ನಲ್ಲಿ ಪತ್ನಿ ಜತೆಗಿನ ವಿವಾದ ಇತ್ಯರ್ಥಗೊಳಿಸಲು ವಿನಾಯಕನ್ ಅವರನ್ನು ಪೊಲೀಸ್ ಠಾಣೆಗೆ ಹಾಜರಾಗುವಂತೆ ಸೂಚಿಸಲಾಗಿತ್ತು. ಆದರೆ ಪೊಲೀಸ್ ಠಾಣೆಯಲ್ಲಿ ಗಲಾಟೆ ಮಾಡಿದ್ದಕ್ಕಾಗಿ ನಟ ವಿನಾಯಕನ್ ಅವರನ್ನು ಬಂಧಿಸಲಾಗಿದೆ ಎಂದು ಪೊಲೀಸ್ ಅಧಿಕಾರಿ ತಿಳಿಸಿದ್ದಾರೆ.

Share News

About BigTv News

Check Also

ಅಭಿಮಾನಿಗಳಿಗೆ ಶಾಕ್ ಡಾಲಿ

ಡಾಲಿ ಧನಂಜಯ್ ಹುಟ್ಟುಹಬ್ಬದ ಹಿನ್ನೆಲೆ ತನ್ನ ಅಭಿಮಾನಿಗಳಿಗೆ ಶಾಕ್ ನೀಡಿದ್ದಾರೆ. ಈ ಬಾರಿ ತಾವು ಹುಟ್ಟುಹಬ್ಬದಂದು ಅಭಿಮಾನಿಗಳಿಗೆ ಸಿಗುವುದಿಲ್ಲ ಎಂದು …

Leave a Reply

Your email address will not be published. Required fields are marked *