ಇವತ್ತು ಕಾರ್ಮಿಕ ದಿನಾಚರಣೆ,ಕಾರ್ಮಿಕ ಸಚಿವರ ಜಿಲ್ಲೆಯಲ್ಲಿ ಇವತ್ತಿನ ಹೋರಾಟ ದೇಶಕ್ಕೆ ಒಂದು ಸಂದೇಶ: ಬೆಲೆ ಏರಿಕೆ ಗಗನಕ್ಕೆ ,ಜನರ ಆದಾಯ ಪಾತಾಳಕ್ಕೆ ಹೋಗ್ತಾ ಇದೆ. ಇದನ್ನ ಹೋಗಲಾಡಿಸಲು ನಾವು ಐದು ಗ್ಯಾರಂಟಿ ನೀಡಿ ಸಹಕಾರ ನೀಡಿದ್ದೇವೆ. ಹೋರಾಟದ ಮೊದಲ ದಿನ ಬಿಜೆಪಿ ಡೀಸೆಲ್ ಗ್ಯಾಸ್ ಬೆಲೆ ಏರಿಕೆ ಮಾಡಿದ್ದಾರೆ.20 ನೆ ತಾರೀಕು ಎರಡನೇ ವರ್ಷದ ಸಂಬ್ರಮ ವಿಜಯನಗರದಲ್ಲಿ ಮಾಡಬೇಕು ಎಂದು ತೀರ್ಮಾನ ಮಾಡಿದ್ದೇವೆ,ಪೌರ ಕಾರ್ಮಿಕರಿಗೆ ಖಾಯಂ ಮಾಡುತ್ತೇವೆ ಎಂದು ಮಾತು ಕೊಟ್ಟಂತೆ ಇಂದು ನಡೆದುಕೊಂಡಿದ್ದೇವೆ.ಬಿಜೆಪಿ 3 ವರ್ಷ ಅಧಿಕಾರದಲ್ಲಿ ಇದ್ದರೂ ಇಂತಹ ಒಂದು ಕೆಲಸ ಮಾಡಿಲ್ಲ, ಉದ್ಯಮಿಗಳು,ಶುಗರ್ ಫ್ಯಾಕ್ಟರಿ ಮಾಲೀಕರ ಒನ್ ಟೈಮ್ ಸೆಟ್ಲಮೆಂಟ್ ಅಂತ ಕೋಟ್ಯಂತರ ವಂಚನೆ ಮಾಡ್ತಾ ಇದ್ದಾರೆ ಎಂದರು.
ಪರೋಕ್ಷವಾಗಿ ರಮೇಶ್ ಜಾರಕಿಹೊಳಿ ಟಾಂಗ್ ನೀಡಿದ ಡಿಕೆಶಿ : ಇಂದು ಚಿನ್ನ ಯಾರು ತೆಗೆದುಕೊಳ್ಳಲು ಆಗುತ್ತಿಲ್ಲ ಇಂದು ಬರಿ ಅರಿಷ್ಣ ಕೊಂಬು ಕಟ್ಟಿಕೊಳ್ಳುವ ಸ್ಥಿತಿ ಬಂದಿದೆ. ಬೆಲೆ ಏರಿಕೆ ಎರಡು ಪಟ್ಟು ಹೆಚ್ಚಾಗಿ ಎಂದು ಆಕ್ರೋಶ ವ್ಯಕ್ತಪಡಿಸಿದರು. ಕೇಂದ್ರ ಸರ್ಕಾರ ಮನೆ ಕಟ್ಟಲು ಹಣ ನೀಡಿ ಮತ್ತೆ gst ರೂಪದಲ್ಲಿ ಕಿಟ್ಟುಕೊಳ್ಳತ್ತಾ ಇದೆ. ನಿಮ್ಮ ಆಕ್ರೋಶ ಬಿಜೆಪಿ ವಿರುದ್ಧ ಇರಬೇಕು ನಮ್ಮ ವಿರುದ್ಧ ಅಲ್ಲಾ
ಇಂದು ಬಿಜೆಪಿಗೆ ಟಾಂಗ್ ಎಂದರು. ಬಿಜೆಪಿಯವರು ಏನಾದ್ರೂ ಬೆಳಗಾವಿ ಥರ ಗಲಾಟೆ ಮಾಡಿದ್ರೆ ಸುಮ್ಮನೆ ಇರುವುದಿಲ್ಲ ಎಂದು ವಾರ್ನಿಂಗ್. ಭಾಷಣದಲ್ಲೇ ಬಿಜೆಪಿ ಕಾರ್ಯಕೃತರಿಗೆ ವಾರ್ನಿಂಗ್ ಕೊಟ್ಟು ಭಾಷಣ ಮುಗಿಸಿದ ಡಿಕೆಶಿ.
bigtvnews | Hubli Dharwad News | Kannada News | Karnataka News Hubli News | News In Hubli | Local news

