ನಾಗನಗೌಡ ಗೌಡಪ್ಪ ಪಾಟೀಲ್ ಒಡೆತನದ ಬಾಡಿಗೆ ಮನೆಯಲ್ಲಿ ವಾಸಿಸುತ್ತಿದ್ದ ಭೀಮಪ್ಪ, ಪಾಟೀಲ್ ಅವರ ಕೃಷಿ ಭೂಮಿಯಲ್ಲಿ ಕೆಲಸ ಮಾಡಿಕೊಂಡು, ಅವರ ಜಾನುವಾರುಗಳನ್ನು ಸಹ ನೋಡಿಕೊಳ್ಳುತ್ತಿದ್ದರು. ಅನಾರೋಗ್ಯದ ಕಾರಣ ಭೀಮಪ್ಪ ಅವರಿಗೆ ದನಗಳನ್ನು ನೋಡಿಕೊಳ್ಳಲು, ತನ್ನ ದೈನಂದಿನ ಕರ್ತವ್ಯಗಳನ್ನು ನಿರ್ವಹಿಸಲು ಸಾಧ್ಯವಾಗಿಲ್ಲ.ಮೇ 1ರ ಗುರುವಾರ ಸಂಜೆ 4 ಗಂಟೆ ಸುಮಾರಿಗೆ ಭೀಮಪ್ಪ ಅವರ ಆರೋಗ್ಯ ಹದಗೆಟ್ಟಿದ್ದು, ಮನೆಯಲ್ಲಿ ವಿಶ್ರಾಂತಿ ಪಡೆಯುತ್ತಿದ್ದರು. ಈ ವೇಳೆ ಮನೆಗೆ ಬಂದಿರುವ ಮಾಲೀಕ ನಾಗನಗೌಡ, ದನಗಳನ್ನು ಮೇಯಿಸಲು ಕರೆದುಕೊಂಡ ಹೋಗದ್ದಕ್ಕೆ ಕೋಪದಿಂದ ಪ್ರಶ್ನಿಸಿದ್ದಾನೆ. ಬದುಕಿದ್ದೀಯಾ ಅಥವಾ ಸತ್ತಿದ್ದೀಯಾ ಎಂದು ಕಾಲಿನಿಂದ ಒದ್ದಿದ್ದಾನೆಂದು ಹೇಳಲಾಗುತ್ತಿದೆ.ಘಟನೆ ಬೆನ್ನಲ್ಲೇ ಭೀಮಪ್ಪ ಅವರ ಮಗ ಹನುಮಂತ ಕೆಂಡಪ್ಪಣ್ಣವರ್ ಅವರು ದೂರು ನೀಡಿದ್ದು, ದೂರಿನ ಆಧಾರದ ಮೇಲೆ ನಾಗನಗೌಡ ಪಾಟೀಲ್ ವಿರುದ್ಧ ಹಿರೇಬಾಗೇವಾಡಿ ಪೊಲೀಸ್ ಠಾಣೆಯಲ್ಲಿ ಎಫ್‌ಐಆರ್ ದಾಖಲಿಸಲಾಗಿದೆ. ಸಬ್-ಇನ್ಸ್‌ಪೆಕ್ಟರ್ ಅವಿನಾಶ್ ಎ.ವೈ ಮತ್ತು ಅವರ ತಂಡವು ಕಿಮ್ಸ್ ಆಸ್ಪತ್ರೆಗೆ ಭೇಟಿ ನೀಡಿ ತನಿಖೆಯ ಭಾಗವಾಗಿ ಕುಟುಂಬ ಸದಸ್ಯರಿಂದ ಹೇಳಿಕೆಗಳನ್ನು ದಾಖಲಿಸಿಕೊಂಡಿದ್ದಾರೆ.
Oplus_131072
bigtvnews | Hubli Dharwad News | Kannada News | Karnataka News Hubli News | News In Hubli | Local news

