Breaking News

ಉಮೇಶ್ ಕತ್ತಿ ವಿರುದ್ಧ ವಾಗ್ದಾಳಿ ನಡೆಸಿದ ದಿನೇಶ್ ಗುಂಡುರಾವ್


ಬೆಂಗಳೂರು: ಪ್ರತ್ಯೇಕ ಉತ್ತರ ಕರ್ನಾಟಕ ರಾಜ್ಯದ ಕೂಗನ್ನು ಎತ್ತಿರುವ ಸಚಿವ ಉಮೇಶ್ ಕತ್ತಿ ವಿರುದ್ಧ ತೀವ್ರ ವಾಗ್ದಾಳಿ ನಡೆಸಿರುವ ಕಾಂಗ್ರೆಸ್ ನಾಯಕ ದಿನೇಶ್ ಗುಂಡುರಾವ್ ‘ಪದೇ ಪದೇ ಪ್ರತ್ಯೇಕ ರಾಜ್ಯದ ಮಾತಾನಾಡುವ ಸಚಿವ ಉಮೇಶ್ ಕತ್ತಿಯವರು ನಾಡದ್ರೋಹಿಯಲ್ಲದೆ‌ ಮತ್ತೇನು.? ಉಮೇಶ್ ಕತ್ತಿಯವರಿಗೆ ಕರ್ನಾಟಕದಲ್ಲಿ ಇರಲು ಸಂಕಟವಾದರೆ ರಾಜ್ಯ ಬಿಟ್ಟು ತೊಲಗಲಿ” ಎಂದು ಹೇಳಿದ್ದಾರೆ.

ಇನ್ನು ಮುಂದುವರೆದು ಮಾತನಾಡಿರುವ ಅವರು ‘ನಮ್ಮಲ್ಲಿ ಉತ್ತರ‌ ಕರ್ನಾಟಕ-ದಕ್ಷಿಣ ಕರ್ನಾಟಕ ಎಂಬ ಬೇಧವಿಲ್ಲ.‌ ತಾಯಿನುಡಿ ಕನ್ನಡ ಮಾತಾಡುವವರೆಲ್ಲಾ ಕನ್ನಡಿಗರೇ ಮತ್ತು ತಾಯಿ ಭುವನೇಶ್ವರಿಯ ಮಕ್ಕಳೆ ಎಂದು ಅವರು ಹೇಳಿದರು.

ಉಮೇಶ್ ಕತ್ತಿ ಯವರು ಪ್ರತ್ಯೇಕ ರಾಜ್ಯದ ಕೂಗು ಹಬ್ಬಿಸುತ್ತಿರುವ ಹಿಂದಿನ ಉದ್ದೇಶವೇನು? ಪ್ರತ್ಯೇಕ ರಾಜ್ಯವಾದರೆ ಹಾಳೂರಿಗೆ ಉಳಿದವನೆ ಗೌಡ ಎಂಬಂತೆ‌ ಗೌಡಿಕೆ ಮೆರೆಯುವ ಹುನ್ನಾರವೇ.? ನಿಜವಾದ ಕನ್ನಡಿಗರ‌್ಯಾರು ಕರ್ನಾಟಕ ಇಬ್ಭಾಗವಾಗುವುದನ್ನು ಬಯಸುವುದಿಲ್ಲ. ಕತ್ತಿಯವರು ತಲೆಹರಟೆ ಮಾಡುವುದನ್ನು ಬಿಟ್ಟು ಏಕೀಕರಣದ ಹೋರಾಟದ ಹಿನ್ನೆಲೆ ತಿಳಿಯಲಿ ಎಂದು ದಿನೇಶ್ ಗುಂಡುರಾವ್ ತಿಳಿಹೇಳಿದ್ದಾರೆ.

Share News

About BigTv News

Check Also

ಮಣಿಪುರದಲ್ಲಿ ಮತ್ತೆ ಹಿಂಸಾಚಾರ: ಅಪಹರಿಸಿ ವ್ಯಕ್ತಿ ಹತ್ಯೆ

ಮಣಿಪುರದಲ್ಲಿ ಮತ್ತೆ ಹಿಂಸಾಚಾರ ಉಲ್ಬಣಗೊಂಡಿದ್ದು ಮೈತೇಯಿ ಸಮುದಾಯಕ್ಕೆ ಸೇರಿದ ವ್ಯಕ್ತಿಯನ್ನು ಶಂಕಿತ ಕುಕಿ ಸಮುದಾಯದ ಬಂಡುಕೋರರು ಅಪಹರಿಸಿ ಗುಂಡಿಕ್ಕಿ ಹತ್ಯೆ …

Leave a Reply

Your email address will not be published. Required fields are marked *