ಆನೇಕಲ್ನ ಅರಣ್ಯ ಪ್ರದೇಶದ ಅಂಚಿನಲ್ಲಿ ವ್ಯಕ್ತಿಯೋರ್ವನ ಶವ ಅರೆ ಸುಟ್ಟ ಸ್ಥಿತಿಯಲ್ಲಿ ಪತ್ತೆಯಾಗಿದೆ. ಸ್ಥಳದಲ್ಲಿದ್ದ ಸಿಕ್ಕ ಒಂದು ದ್ವಿಚಕ್ರ ವಾಹನದ ವಿವರಗಳಿಂದ ಮೃತನು ಜೆಪಿ ನಗರದ ನಿವಾಸಿ ಮಧುಸೂದನ್ (27) ಎಂದು ಗುರುತಿಸಿದ್ದಾರೆ.ಬೆಳಗ್ಗೆ ದನಗಾಹಿಯೋರ್ವನು ಬನ್ನೇರುಘಟ್ಟ ಅರಣ್ಯದ ಶಿಲೀಂದ್ರದೊಡ್ಡಿಯಲ್ಲಿ ಶವ ಕಂಡಾಗ ಈ ಬಗ್ಗೆ ಪೊಲೀಸರಿಗೆ ಮಾಹಿತಿ ನೀಡಿದ್ದಾನೆ. ಭೂತನಹಳ್ಳಿ ಸರ್ವೆ ನಂಬರ್ 67ರ ಸ್ಥಳದಲ್ಲಿ ಶವ ಪತ್ತೆಯಾಗಿದ್ದು, ಮೇಲ್ನೋಟಕ್ಕೆ ಆತ್ಮಹತ್ಯೆ ಶಂಕೆ ವ್ಯಕ್ತವಾಗಿದೆ. ಮೃತ ಮಧೂಸೂದನ್ ಆನ್ಲೈನ್ ಟ್ರೇಡಿಂಗ್ ಕೆಲಸ ಮಾಡುತ್ತಿದ್ದ ಎಂದು ತಿಳಿದುಬಂದಿದೆ.
bigtvnews | Hubli Dharwad News | Kannada News | Karnataka News Hubli News | News In Hubli | Local news

