Breaking News

ಬೆಂಗಳೂರು: ಅಪಾರ್ಟ್​ಮೆಂಟ್​ನಲ್ಲಿ 3 ಕೋಟಿ ರೂ. ಮೌಲ್ಯದ ಗಾಂಜಾ ಪತ್ತೆ!!

ಅಪಾರ್ಟ್​ಮೆಂಟ್​ವೊಂದರಲ್ಲಿ 3 ಕೋಟಿ ಮೌಲ್ಯದ 100 ಕೆಜಿ ಗಾಂಜಾ ಪತ್ತೆಯಾಗಿದೆ. ಗಾಂಜಾ ಸಂಗ್ರಹಿಸಿದ್ದ ಕೇರಳ ಮೂಲದ ಆರೋಪಿ ಸಚಿನ್​ನನ್ನು ಪೊಲೀಸರು ವಶಕ್ಕೆ ಪಡೆದಿದ್ದಾರೆ.ಆರೋಪಿಗಳು ಹೊರರಾಜ್ಯಗಳಿಂದ ಗಾಂಜಾ ತರಿಸಿ, ಅಪಾರ್ಟ್ಮೆಂಟ್​ನಲ್ಲಿ ಸಣ್ಣ ಸಣ್ಣ ಪ್ಯಾಕೆಟ್​ಗಳಲ್ಲಿ ಪ್ಯಾಕ್ ಮಾಡುತ್ತಿದ್ದರು. ಬಳಿಕ ಆರೋಪಿಗಳು ಗ್ರಾಹಕರಿಗೆ ಮಾರಾಟ ಮಾಡುತ್ತಿದ್ದರು. ಆರೋಪಿಗಳು ಇದ್ದ ಕೊಠಡಿಯಲ್ಲಿ ವೇಯಿಂಗ್ ಸ್ಕೇಲ್, ಪ್ಯಾಕಿಂಗ್ ಟೇಪ್, ರಾಶಿ ರಾಶಿ ಗಾಂಜಾ ಪಾಕೇಟ್ಗಳು ಪತ್ತೆಯಾಗಿವೆ.ಗ್ಯಾಮ್ಲಿಂಗ್ ಸಂಬಂಧ 55 ಕೇಸ್ ದಾಖಲಿಸಿಕೊಂಡು 205 ಆರೋಪಿಗಳನ್ನು ಬಂಧಿಸಿದ್ದಾರೆ. ಕ್ರಿಕೆಟ್ ಬೆಟ್ಟಿಂಗ್ ಸಂಬಂಧ 23 ಕೇಸ್ ದಾಖಲಿಸಿ 30 ಜನರನ್ನು ಬಂಧಿಸಿದ್ದಾರೆ. ಅಕ್ರಮ ಮಾನವ ಕಳ್ಳಸಾಗಣೆ 8 ಕೇಸ್ ದಾಖಲು, 10 ಮಂದಿ ಆರೋಪಿಗಳನ್ನು ಬಂಧಿಸಲಾಗಿದೆ. ಅಕ್ರಮ ಶಸ್ತ್ರಾಸ್ತ್ರ ಕಾಯ್ದೆ ಅಡಿಯಲ್ಲಿ 9 ಮಂದಿ ಆರೋಪಿಗಳು ಅರೆಸ್ಟ್ ಮಾಡಲಾಗಿದೆ. ಹಾಗೇ ವಿವಿಧ ಸೆಕ್ಷನ್ ಅಡಿಯಲ್ಲಿ 1 ತಿಂಗಳಲ್ಲಿ ಒಟ್ಟು 188 ಕೇಸ್ ದಾಖಲಾಗಿದ್ದು, 366 ಆರೋಪಿಗಳ ವಿರುದ್ಧ ಕಾನೂನು ಕ್ರಮ ಕೈಗೊಳ್ಳಲಾಗಿದೆ.

Share News

About BigTv News

Check Also

TCS ನಾಸಿಕ್ ಪ್ರಕರಣ: ಆರೋಪಿ ನಿದಾ ಖಾನ್ ಪತಿ ಬಂಧನ

ಮಹಾರಾಷ್ಟ್ರದ ನಾಸಿಕ್‌ನಲ್ಲಿರುವ ಟಾಟಾ ಕನ್ಸಲ್ಟೆನ್ಸಿ ಸರ್ವಿಸಸ್ (ಟಿಸಿಎಸ್) ಶಾಖೆಯ ಸುತ್ತಲಿನ ವಿವಾದ ನಾಟಕೀಯ ತಿರುವು ಪಡೆದುಕೊಂಡಿದ್ದು, ಕಂಪನಿಗೆ ಸಂಬಂಧಿಸಿದ ಒಂಬತ್ತು …

Leave a Reply

Your email address will not be published. Required fields are marked *