ಮಂಡ್ಯ: ಜಿಲ್ಲೆಯ ಹಿರಿಕಳಲೆ ಗ್ರಾಮದ ವೆಂಕಟಯ್ಯ ಅವರ ಪುತ್ರ ಕಟ್ಟಡ ಕಾರ್ಮಿಕರಾದ ನಾರಾಯಣಯ್ಯ(52) ಇಂದು ಕೆ.ಆರ್.ಪೇಟೆ ಪಟ್ಟಣದಲ್ಲಿ ಮನೆಯ ಕಟ್ಟಡ ನಿರ್ಮಾಣದ ಸಹಾಯಕನಾಗಿ ಕೆಲಸ ಮಾಡುತ್ತಿದ್ದಾಗ ತೀವ್ರ ಹೃದಯಾಘಾತಕ್ಕೆ ಒಳಗಾದರು. ಕೂಡಲೇ ನಾರಾಯಣಯ್ಯ ಅವರನ್ನು ಪಟ್ಟಣದ ದುಂಡಶೆಟ್ಟಿಲಕ್ಷ್ಮಮ್ಮ ಸ್ಮಾರಕ ಸಾರ್ವಜನಿಕ ಆಸ್ಪತ್ರೆಗೆ ತುರ್ತು ಚಿಕಿತ್ಸೆಗಾಗಿ ದಾಖಲಿಸಲಾಯಿತು… ಆದರೆ ನಾರಾಯಣಯ್ಯ ಚಿಕಿತ್ಸೆ ಫಲಕಾರಿಯಾಗದೇ ಸಾವಿಗೆ ಶರಣಾಗಿದ್ದಾರೆ. ನಾರಾಯಣಯ್ಯ ಅವರನ್ನು ಹಿರೀಕಳಲೆ ಗ್ರಾಮದಿಂದ ಪಟ್ಟಣದ ಕಟ್ಟಡದ ಕೆಲಸಕ್ಕೆ ಕರೆತಂದ ಕಟ್ಟಡ ಕಾರ್ಮಿಕರ ಮೇಸ್ತ್ರಿ ಚಂದ್ರಣ್ಣ ಅವರ ವಿರುದ್ಧ ಕೆ.ಆರ್.ಪೇಟೆ ಪಟ್ಟಣ ಪೋಲಿಸ್ ಠಾಣೆಗೆ ದೂರು ನೀಡಲಾಗಿದೆ..
bigtvnews | Hubli Dharwad News | Kannada News | Karnataka News Hubli News | News In Hubli | Local news





