ಕ್ಷುಲ್ಲಕ ಕಾರಣಕ್ಕೆ ಯುವಕನೋರ್ವ ಶಿಕ್ಷಕರೊಬ್ಬರ ಮೇಲೆ ಬಿಯರ್ ಬಾಟಲನಿಂದ ಮಾರಣಾಂತಿಕ ಹಲ್ಲೆ ನಡೆಸಿರುವ ಘಟನೆ ಬಾಗಲಕೋಟೆ ಜಿಲ್ಲೆಯ ಜಮಖಂಡಿ ತಾಲೂಕಿನ ಸಾವಳಗಿ ಗ್ರಾಮದಲ್ಲಿ ಜರುಗಿದೆ.ಶಿಕ್ಷಕನ ಮನೆಯ ಪಕ್ಕದ ಯುವಕ ಪವನ ಜಾಧವ ನಡುವೆ ಕ್ರಿಕೆಟ್ ಬಾಲ್ ವಿಚಾರವಾಗಿ ಮಾತಿನ ಚಕಮಕಿ ನಡೆದಿತ್ತು. ಬಾಲ್ ಶಿಕ್ಷಕನ ಮನೆಯ ಒಳಗೆ ಬಿದ್ದಿದ್ದರಿಂದ ಶಿಕ್ಷಕ ಬೈದು ಬುದ್ದಿವಾದ ಹೇಳಿದ್ದರಂತೆ. ಆದರೆ ಶಿಕ್ಷಕ ಬೈದಿರುವ ಬಗ್ಗೆ ಯುವಕ ಪವನ ಮನಸ್ಸಿನಲ್ಲಿ ದ್ವೇಷವನ್ನು ಬೆಳೆಸಿಕೊಂಡಿದ್ದ. ಇದೇ ದ್ವೇಷದ ಕಾರಣದಿಂದ ಶಾಲೆಗೆ ಬಂದು ಶಿಕ್ಷಕನ ಮೇಲೆ ಒಡೆದ ಬಿಯರ್ ಬಾಟಲನಿಂದ ಮಾರಣಾಂತಿಕ ಹಲ್ಲೆ ಮಾಡಿದ್ದಾರೆಂದು ತಿಳಿದು ಬಂದಿದೆ.ಶಿಕ್ಷಕ ಅದೃಷ್ಟವಶಾತ್ ಪ್ರಾಣಾಪಾಯದಿಂದ ಪಾರಾಗಿದ್ದಾರೆಂದು ತಿಳಿದು ಬಂದಿದೆ. ವಿಷಯ ತಿಳಿದು ಸ್ಥಳಕ್ಕೆ ದೌಡಾಯಿಸಿದ ಸಾವಳಗಿ ಠಾಣೆಯ ಪೊಲೀಸರು ಯುವಕನನ್ನ ವಶಕ್ಕೆ ಪಡೆದು ವಿಚಾರಣೆಗೆ ಒಳಪಡಿಸಿದ್ದಾರೆ. ಸಾವಳಗಿ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.
bigtvnews | Hubli Dharwad News | Kannada News | Karnataka News Hubli News | News In Hubli | Local news

