ಇಂದು ನಗರದ ವಿಮಾನ ನಿಲ್ದಾಣದಲ್ಲಿ ಮಾಧ್ಯಮದ ಮುಂದೆ ಮಾತನಾಡಿದ ಇವರು, ಕಾಂಗ್ರೆಸ್ ತಮ್ಮ ಅಧಿಕಾರದಲ್ಲಿದ್ದಾಗ ಸೈನ್ಯವನ್ನು ಗಟ್ಟಿ ಮಾಡೋ ಕೆಲಸ ಮಾಡಲಿಲ್ಲ.ಎಚ್ ಎ ಎಲ್ ಸೇರಿದಂತೆ ಅನೇಕ ಸಂಸ್ಥೆಗಳಿಗೆ ಹಣ ಕಡಿಮೆ ಮಾಡಿತ್ತು.ಭಾರತೀಯ ಸೈನ್ಯ ಇಂದು ಸ್ವಾವಲಂಭಿಯಾಗಿದೆ.ಇಂದು ಕಾಂಗ್ರೆಸ್ ಅನವಶ್ಯಕ ಆರೋಪ ಮಾಡುತ್ತಿದೆ.ಸಿದ್ದರಾಮಯ್ಯ ನವರು ಯುದ್ದ ಯಾಕೆ ಬೇಕು ಅಂತ ಹೇಳಿದ್ರು.ಈ ಮಾತುಗಳು ನಿಮ್ಮ ಹೈಕಮಾಂಡ್ ಸೂಚನೆ ಮೇರಿಗೆ ಮಾತನಾಡ್ತಿದ್ದೀರಾ..?. ಭಾರತೀಯ ಸೇನೆಗೆ ಯಾವುದೇ ಸೌಲಭ್ಯ ಒದಗಿಸಲಿಲ್ಲ ಉರಿ ಘಟನೆ ನಡೆದಾಗಲೂ ಪ್ರಶ್ನೆ ಮಾಡಿದ್ದರು.ನುಗ್ಗಿ ಹೊಡೆದವರಿಗೆ ಕಾಂಗ್ರೆಸ್ ಅಪಮಾನ ಮಾಡುತ್ತಿದೆ.ಕಾಂಗ್ರೆಸ್ ಯಾವಾಗಲು ದೇಶದ ಪರ ನಿಂತಿಲ್ಲ.ಅವರ ಆಳ್ವಿಕೆ ಸಮಯದಲ್ಲಿ ಭಾರತದ ಭೂಮಿ ಯನ್ನು ಬಿಟ್ಟುಕೊಡಲಾಯಿತು.ಚೀನಾ, ಬಾಂಗ್ಲಾ, ಪಾಕಿಸ್ತಾನ ಕ್ಕೆ ಬಿಟ್ಟು ಕೊಟ್ಟಿದೆ.ಚೀನಾದ ಅನೇಕ ವಸ್ತುಗಳನ್ನು ಕೂಡ ಬ್ಯಾನ್ ಮಾಡಲಾಗಿದೆ. ಅಂತರಾಷ್ಟ್ರೀಯ ಒಪ್ಪಂದಗಳನ್ನು ಒಮ್ಮೆ ಮುರಿದು ಹಾಕಲು ಆಗಲ್ಲ.ಭಾರತದ ಒಂದಿಂಚು ನೆಲವನ್ನು ಯಾರು ಅತಿಕ್ರಮಣ ಮಾಡಲು ಬಿಡಲ್ಲ.ಕಾಂಗ್ರೆಸ್ ತಮ್ಮ ಕಾಲದಲ್ಲಿ ಏನು ಮಾಡಿದ್ದಾರೆ ಅನ್ನೋದನ್ನ ತಿರುಗಿ ನೋಡಿಕೊಳ್ಳಬೇಕು.ಸದ್ಯ ಇರೋದು ಮೋದಿ ಸರ್ಕಾರ, ಕಾಂಗ್ರೆಸ್ ಸರ್ಕಾರವಲ್ಲ ಎಂದು ಹೇಳಿದರು.
bigtvnews | Hubli Dharwad News | Kannada News | Karnataka News Hubli News | News In Hubli | Local news

