.ರೈಲ್ವೆ ಮೇಲ್ವೇತುವೆ ಉದ್ಘಾಟನಾ ಕಾರ್ಯಕ್ರಮ ರದ್ದು
ಧಾರವಾಡ: ಧಾರವಾಡದ ಕಲ್ಯಾಣನಗರದಲ್ಲಿ ನಿರ್ಮಾಣಗೊಂಡಿರುವ ರೈಲ್ವೆ ಮೇಲ್ವೇತುವೆ ಉದ್ಘಾಟನಾ ಕಾರ್ಯಕ್ರಮವನ್ನು ರದ್ದು ಪಡಿಸಲಾಗಿದೆ.
ಓಡಿಸಾದ ಬಾಲಸೋರ್‌ನಲ್ಲಿ ನಡೆದ ರೈಲು ದುರಂತದ ಹಿನ್ನೆಲೆಯಲ್ಲಿ ಈ ಕಾರ್ಯಕ್ರಮವನ್ನು ರದ್ದುಪಡಿಸಲಾಗಿದೆ. ಲೆವೆಲ್ ಕ್ರಾಸಿಂಗ್ ಗೇಟ್ ಹಾಗೂ ರೈಲ್ವೆ ಮೇಲ್ವೇತುವೆಯ ಉದ್ಘಾಟನಾ ಕಾರ್ಯಕ್ರಮವನ್ನು ಇಂದು ಹಮ್ಮಿಕೊಳ್ಳಲಾಗಿತ್ತು.
ಕೇಂದ್ರ ಸಚಿವ ಪ್ರಹ್ಲಾದ ಜೋಶಿ ಈ ಕಾರ್ಯಕ್ರಮದ ಉದ್ಘಾಟನೆ ಮಾಡಬೇಕಿತ್ತು. ಅಲ್ಲದೇ ರಾಜ್ಯದ ಸಚಿವರು, ಶಾಸಕರು ಕೂಡ ಈ ಕಾರ್ಯಕ್ರಮದಲ್ಲಿ ಭಾಗಿಯಾಗುವವರಿದ್ದರು. ಕಾರ್ಯಕ್ರಮದ ಸಲುವಾಗಿ ಬೃಹತ್ ವೇದಿಕೆ ಕೂಡ ನಿರ್ಮಾಣಗೊಂಡಿತ್ತು. ಅಲ್ಲದೇ ಆಸನಗಳ ವ್ಯವಸ್ಥೆಯನ್ನೂ ಮಾಡಿಕೊಳ್ಳಲಾಗಿತ್ತು. ಈ ಕಾರ್ಯಕ್ರಮ ಇದೀಗ ಹಠಾತ್ ರದ್ದಾಗಿದ್ದರಿಂದ ಇದೀಗ ಎಲ್ಲವನ್ನೂ ತೆರವುಗೊಳಿಸಲಾಗುತ್ತಿದೆ.
bigtvnews | Hubli Dharwad News | Kannada News | Karnataka News Hubli News | News In Hubli | Local news





