Breaking News

ಗದಗ :ತಹಶಿಲ್ದಾರ ಕಚೇರಿಯಲ್ಲಿ ಯುವಕನ ಮೇಲೆ ಹಲ್ಲೆ!

ಗದಗ ನಗರದ ತಹಶೀಲ್ದಾರ್ ಕಚೇರಿಯಲ್ಲೊಂದು ಅಧಿಕಾರಿಗಳ ದುರ್ವರ್ತನೆಗೆ ಸಾಕ್ಷೀಕರಿಸುವಂಥ ಘಟನೆ ನಡೆದಿದ್ದು, ನ್ಯಾಯ ಕೇಳಲು ಬಂದ ಯುವಕನೊಬ್ಬನಿಗೆ ಉಪ ತಹಶೀಲ್ದಾರ್ ಹಾಗೂ ಅವರ ಸಂಗಡಿಗರು ಕಚೇರಿಯಲ್ಲೇ ಹಲ್ಲೆ ನಡೆಸಿದ ಘಟನೆ ಬೆಳಕಿಗೆ ಬಂದಿದೆ.ಘಟನೆಯ ವಿಚಾರಣೆಗಾಗಿ ಮತ್ತು ತಪ್ಪಿದವರನ್ನು ಗುರುತಿಸಲು ಅಕ್ಷಯ್ ತಹಶೀಲ್ದಾರ್ ಕಚೇರಿಗೆ ತೆರಳಿದ್ದರು. ಅಲ್ಲಿ ಕಾರು ಯಾರದು? ಹೆಸರು ತಿಳಿಸಿ ಎಂದು ಕೇಳಿದ ಅಕ್ಷಯ್‌ನ ಪ್ರಶ್ನೆಗೆ ಕೆರಳಿದ ಉಪ ತಹಶೀಲ್ದಾರ್ ಎಸ್. ಡಿ. ವಾಲ್ಮೀಕಿ ಹಾಗೂ ಅವರ ತಂಡ, ಅಕ್ಷಯ್ ಅನ್ನು ಕಚೇರಿಗೆ ಕರೆಸಿಕೊಂಡು ಹಲ್ಲೆ ನಡೆಸಿದರು ಎಂದು ಹೇಳಲಾಗಿದೆ.ಸಾಕ್ಷ್ಯ ಪ್ರಕಾರ, ಕಚೇರಿಯೊಳಗೆಯೇ ಅಕ್ಷಯ್‌ನ ಮೇಲೆ ಕುರ್ಚಿಯಿಂದ ಹೊಡೆದು ದೌರ್ಜನ್ಯ ನಡೆದಿದೆ. ಈ ಘಟನೆಯಲ್ಲಿ ವಾಲ್ಮೀಕಿ ಜೊತೆ ಕಾಂಗ್ರೆಸ್ ಮುಖಂಡ ವಿದ್ಯಾಧರ್ ದೊಡ್ಡಮನಿ ಹಾಗೂ ಮತ್ತೊಬ್ಬರೂ ಭಾಗಿಯಾಗಿದ್ದರು. ಮೂವರು ಸೇರಿ ಅಕ್ಷಯ್ ಮೇಲೆ ಹಲ್ಲೆ ನಡೆಸಿದ್ದಾರೆಂದು ಆರೋಪವಿದೆ.

Share News

About BigTv News

Check Also

ಬೆಂಗಳೂರು: ಪಬ್‌ನಲ್ಲಿ ಲೈಟರ್ ಕೇಳಿ ಪರಿಚಯವಾದ ರಾಜಸ್ಥಾನದ ಯುವತಿಯ ಹೋಟೆಲ್‌ಗೆ ಕರೆದೊಯ್ದು ಅತ್ಯಾಚಾರ ಎಸಗಿದ ಆರೋಪಿಯ ಬಂಧನ

ಬೆಂಗಳೂರು: ರಾಜಸ್ಥಾನದ ಜೈಪುರದಿಂದ ಬೆಂಗಳೂರಿಗೆ ಬಂದಿದ್ದ ಯುವತಿಯೊಬ್ಬರಿಗೆ ಕೋರಮಂಗಲದ ಪಬ್‌ನಲ್ಲಿ ಸಮೀರ್ ಎಂಬಾತ ಪರಿಚಯವಾಗಿದ್ದಾನೆ. ಸಿಗರೇಟ್ ಸೇದಲು ಲೈಟರ್ ಕೇಳಿದಾಗ …

Leave a Reply

Your email address will not be published. Required fields are marked *