Breaking News

ಡಿಜಿಟಲ್ ಅರೆಸ್ಟ್ | ಮಾಜಿ ನ್ಯಾಯಾಧೀಶರಿಗೆ ಒಂದು ಕೋಟಿ.ರೂ.ಗೂ ಅಧಿಕ ವಂಚನೆ

ಹೈದರಾಬಾದ್: ಮಾಜಿ ಜಿಲ್ಲಾ ನ್ಯಾಯಾಧೀಶರೋರ್ವರು ಡಿಜಿಟಲ್ ಅರೆಸ್ಟ್ ವಂಚನೆಗೆ ಬಲಿಯಾಗಿ ಒಂದು ಕೋಟಿ ರೂ.ಗೂ ಅಧಿಕ ಹಣವನ್ನು ಕಳೆದುಕೊಂಡಿದ್ದಾರೆ ಎಂದು ಪೊಲೀಸರು ಸೋಮವಾರ ತಿಳಿಸಿದರು. 69 ವರ್ಷದ ನಿವೃತ್ತ ನ್ಯಾಯಾಧೀಶರ ಮೊಬೈಲ್ ಫೋನ್ ಸಂಖ್ಯೆ ಮಹಿಳೆಯರ ಕಳ್ಳ ಸಾಗಣೆ ಮತ್ತು ಇತರ ಅಪರಾಧಗಳಲ್ಲಿ ಒಳಗೊಂಡಿದೆ ಎಂದು ಸೈಬರ್ ಕ್ರಿಮಿನಲ್‌ಗಳು ವಾರದ ಹಿಂದೆ ಅವರಿಗೆ ಬೆದರಿಸಿದ್ದರು. ಇಲ್ಲಿಯ ಮಲ್ಕಾಜ್ಗಿರಿ ನಿವಾಸಿಯಾಗಿರುವ ಅವರು ಒಂದು ಕೋಟಿ ರೂ.ಗೂ ಅಧಿಕ ಹಣವನ್ನು ವಂಚಕರಿಗೆ ವರ್ಗಾಯಿಸಿದ್ದರು. ತಾನು ವಂಚನೆಗೊಳಗಾಗಿದ್ದು ಗೊತ್ತಾದ ಬಳಿಕ ಮೂರು ದಿನಗಳ ಹಿಂದೆ ಅವರು ಪೊಲೀಸರಿಗೆ ದೂರು ಸಲ್ಲಿಸಿದ್ದು,ತನಿಖೆಯು ಪ್ರಗತಿಯಲ್ಲಿದೆ.

Share News

About BigTv News

Check Also

TCS ನಾಸಿಕ್ ಪ್ರಕರಣ: ಆರೋಪಿ ನಿದಾ ಖಾನ್ ಪತಿ ಬಂಧನ

ಮಹಾರಾಷ್ಟ್ರದ ನಾಸಿಕ್‌ನಲ್ಲಿರುವ ಟಾಟಾ ಕನ್ಸಲ್ಟೆನ್ಸಿ ಸರ್ವಿಸಸ್ (ಟಿಸಿಎಸ್) ಶಾಖೆಯ ಸುತ್ತಲಿನ ವಿವಾದ ನಾಟಕೀಯ ತಿರುವು ಪಡೆದುಕೊಂಡಿದ್ದು, ಕಂಪನಿಗೆ ಸಂಬಂಧಿಸಿದ ಒಂಬತ್ತು …

Leave a Reply

Your email address will not be published. Required fields are marked *