Breaking News

ಕಿಕ್ಕೇರಿ: ಸಿಡಿಲು ಬಡಿದು ಎರಡು ಕೋಣ ಸಾವು!

ರೈತ ಮಹದೇವು ಅವರಿಗೆ ಸೇರಿದ ಈ ಕೋಣಗಳನ್ನು ಕೊಟ್ಟಿಗೆಯಲ್ಲಿ ಕಟ್ಟಿಹಾಕಿದ್ದ ವೇಳೆ ಸೋಮವಾರ ರಾತ್ರಿ ಕೋಣಗಳಿಗೆ ಸಿಡಿಲು ಅಪ್ಪಳಿಸಿದ ಪರಿಣಾಮ ಸ್ಥಳದಲ್ಲಿಯೇ ಕೋಣಗಳು ಸಾವಿಗೀಡಾಗಿವೆ.ಮನೆಯಲ್ಲಿದ್ದ ಕುಟುಂಬದವರು ಸಿಡಿಲಿನಿಂದ ಪಾರಾಗಿದ್ದಾರೆ.’₹2.50 ಲಕ್ಷ ಬೆಲೆಬಾಳುವ ಈ ಕೋಣಗಳನ್ನು ಖರೀದಿಗೆ ಬಂದರೂ ನಾನು ಕೊಡಲಿಲ್ಲ. ಖುಷಿಗಾಗಿ ನಾನೇ ಸಾಕಿಕೊಂಡಿದ್ದೇ’ಎಂದು ಮಹದೇವು ತಿಳಿಸಿದರು.ಸ್ಥಳಕ್ಕೆ ಪಾಂಡವಪುರ ಉಪವಿಭಾಗಾಧಿಕಾರಿ ಕೆ.ಆರ್. ಶ್ರೀನಿವಾಸ್ ಭೇಟಿ ನೀಡಿ ಸೂಕ್ತ ಪರಿಹಾರ ಕೊಡಿಸುವುದಾಗಿ ಭರವಸೆ ನೀಡಿದರು.

Share News

About BigTv News

Check Also

ಚಿನ್ನ ಖರೀದಿಸಲು ಬಂದವನಂತೆ ನಾಟಕವಾಡಿ ₹13 ಲಕ್ಷದ ಆಭರಣ ಎಗರಿಸಿದ ಖದೀಮ! ಕನ್ನಡಿಯಲ್ಲಿ ಮುಖ ನೋಡುತ್ತಲೇ ಮಾಲೀಕರಿಗೆ ಪಂಗನಾಮ

ಬೆಂಗಳೂರು: ಚಿನ್ನಾಭರಣ ಖರೀದಿಸುವ ನೆಪದಲ್ಲಿ ಜ್ಯುವೆಲ್ಲರಿ ಅಂಗಡಿಗೆ ಬಂದ ವ್ಯಕ್ತಿಯೊಬ್ಬ ₹13.20 ಲಕ್ಷ ಮೌಲ್ಯದ ಚಿನ್ನ ಕಳವು ಮಾಡಿದ್ದಾನೆ. ಪ್ರಕರಣಕ್ಕೆ …

Leave a Reply

Your email address will not be published. Required fields are marked *