ಗಂಡನಿಂದ ದೂರವಾದ ಮಹಿಳೆ ವಂಚಕರ ಗ್ಯಾಂಗ್ ಸೇರಿಕೊಂಡು ಕೇವಲ 7 ತಿಂಗಳಲ್ಲಿ ಬರೋಬ್ಬರಿ 25 ಪುರುಷರನ್ನು ಮದುವೆ ಮಾಡಿಕೊಂಡಿದ್ದಾಳೆ. ಜೊತೆಗೆ, ಸೊಸೆಯಾದ ಹೋದ ಮನೆಯಲ್ಲಿರುವ ಎಲ್ಲ ಚಿನ್ನಾಭರಣ, ನಗದು ಹಾಗೂ ಎಲೆಕ್ಟ್ರಾನಿಕ್ ವಸ್ತುಗಳನ್ನು ಕದ್ದು ಪರಾರಿ ಆಗಿದ್ದಾಳೆ.25ನೇ ಮದುವೆಯ ವರ ಪೊಲೀಸ್ ಕಾನ್‌ಸ್ಟೇಬಲ್ ಆಗಿದ್ದನು. ಕಾನಸ್ಟೇಬಲ್‌ನನ್ನು ಮದುವೆ ಮಾಡಿಕೊಂಡು ವಂಚನೆ ಮಾಡಬೇಕು ಎನ್ನುವಷ್ಟರಲ್ಲಿ ಲೂಟಿ ಮಾಡಿದ್ದ ಹಣದ ಸಮೇತ ರಾಜಸ್ಥಾನ ಪೊಲೀಸರಿಗೆ ಲಾಕ್ ಆಗಿದ್ದಾಳೆ.ಮದುವೆ ಮಾಡಿಕೊಂಡು ವಂಚನೆ ಮಾಡುತ್ತಿದ್ದ ಮಹಿಳೆಯನ್ನು ಅನುರಾಧ ಪಾಸ್ವಾನ್ ಎಂದು ಗುರುತಿಸಲಾಗಿದೆ. ಅನುರಾಧಾಳನ್ನು ಸೆರೆ ಹಿಡಿದಿದ್ದಾರೆ. ಇದೀಗ ಪೊಲೀಸರು ತನಿಖೆ ಕೈಗೊಂಡಿದ್ದು, ಮತ್ತಷ್ಟು ಮದುವೆ ವಂಚನೆ ಮಾಡಿರುವ ಪ್ರಕರಣಗಳನ್ನು ಬಾಯಿ ಬಿಡಿಸುತ್ತಿದ್ದಾರೆ.
bigtvnews | Hubli Dharwad News | Kannada News | Karnataka News Hubli News | News In Hubli | Local news

