Breaking News

ಪಾಕಿಸ್ತಾನದಲ್ಲಿ ಮದುವೆಯಾಗುವ ಪ್ಲ್ಯಾನ್ ಮಾಡಿದ್ದ ದೇಶದ್ರೋಹಿ ಯೂಟ್ಯೂಬರ್ ಜ್ಯೋತಿ!

ಜ್ಯೋತಿ ಮೂಲತಃ ಭಾರತದವಳಾಗಿ, ಭಾರತದ ವಾತಾವರಣದಲ್ಲಿ ಬೆಳೆದು, ಭಾರತದ ಅನ್ನುವನ್ನು ತಿಂದು, ಪಾಪಿ ಪಾಕಿಸ್ತಾನದ ಜೊತೆ ಕೈ ಜೋಡಿಸಿದ್ದ ಮಹಿಳೆ. ಟ್ರಾವೆಲ್ ವಿತ್ ಜೋ ಎಂಬ ಯೂಟ್ಯೂಬ್ ಚಾನೆಲ್‌ ಹೆಸರಿನಲ್ಲಿ ಮಣ್ಣು ತಿನ್ನುವ ಕೆಲಸವನ್ನು ಮಾಡಿ ಸದ್ಯ ಪೊಲೀಸರ ಅತಿಥಿಯಾಗಿದ್ದಾಳೆ.ಐಎಸ್‌ಐ ಏಜೆಂಟ್‌ ಅಲಿ ಹಸನ್‌ ಜೊತೆಗಿನ ಜ್ಯೋತಿ ಮಲ್ಹೋತ್ರಾ ಮಾಡಿದ್ದ ವಾಟ್ಸಾಪ್ ಚಾಟ್‌ಗಳು ಪೊಲೀಸ್ ತನಿಖೆ ವೇಳೆ ಬಯಲಾಗಿದ್ದು, ಪಾಕಿಸ್ತಾನದಲ್ಲಿ ಮದುವೆಯಾಗಬೇಕೆನ್ನುವ ಕನಸನ್ನು ಜ್ಯೋತಿ ಕಂಡಿದ್ದರು ಎನ್ನುವುದು ಬಹಿರಂಗವಾಗಿದೆ.ಒಟ್ಟು ನಾಲ್ಕು ಬ್ಯಾಂಕ್ ಖಾತೆಗಳನ್ನು ಜ್ಯೋತಿ ಮಲ್ಹೋತ್ರಾ ಹೊಂದಿದ್ದು, ಆ ಪೈಕಿ ಒಂದು ಖಾತೆಯಲ್ಲಿ ದುಬೈನಿಂದ ಹಣದ ವ್ಯವಹಾರ ನಡೆದಿರುವುದು ಪತ್ತೆಯಾಗಿದೆ. ದುಬೈದಿಂದ ಆಕೆ ಹಣ ಪಡೆಯುತ್ತಿದ್ದಿದ್ದು ಯಾಕೆ, ಹಣ ಕಳುಹಿಸುತ್ತಿದ್ದ ವ್ಯಕ್ತಿ ಯಾರು ಎನ್ನುವ ಪ್ರಶ್ನೆಗೆ ಉತ್ತರ ಹುಡುಕುವ ಪ್ರಯತ್ನ ನಡೆದಿದೆ ಎಂದು ಪೊಲೀಸರು ಸದ್ಯ ತಿಳಿಸಿದ್ದಾರೆ.ಒಟ್ನಲ್ಲಿ ಭಾರತದಲ್ಲಿ ಇದ್ದುಕೊಂಡು ಪಾಕಿಸ್ತಾನದ ಪರ ಬೇಹುಗಾರಿಕೆ ಮಾಡುತ್ತಿದ್ದ ಜ್ಯೋತಿ ಮಲ್ಹೋತ್ರಾ ಭಾರತೀಯ ಸೇನೆಯ ಚಲನವಲನಗಳ ಬಗ್ಗೆ ಸೂಕ್ಷ್ಮ ಮಾಹಿತಿಯನ್ನು ಕಲೆ ಹಾಕುತ್ತಿದ್ದಳು ಮತ್ತೂ ಆ ಮಾಹಿತಿಗಳನ್ನು ಪಾಕಿಸ್ತಾನದ ಗೂಢಚಾರರೊಂದಿಗೆ ಹಂಚಿಕೊಂಡಿದ್ದಳು ಎನ್ನುವುದು ಪೊಲೀಸ್ ತನಿಖೆ ವೇಳೆ ಸ್ಪಷ್ಟವಾಗಿದೆ.

Share News

About BigTv News

Check Also

ದೇರಳಕಟ್ಟೆ: ಮೆಡಿಕಲ್‌ ಕಾಲೇಜಿನಲ್ಲಿ Ragging ಪ್ರಕರಣ ದಾಖಲು

ಮಂಗಳೂರು: ದೇರಳಕಟ್ಟೆಯ ಮೆಡಿಕಲ್ ಕಾಲೇಜೊಂದರಲ್ಲಿ ಕಿರಿಯ ವಿದ್ಯಾರ್ಥಿಗಳಿಗೆ ಹಿರಿಯ ವಿದ್ಯಾರ್ಥಿಗಳು ರಾಗಿಂಗ್ ನಡೆಸಿ ಜೀವ ಬೆದರಿಕೆ ಹಾಕಿರುವ ಆರೋಪದಡಿ ಉಳ್ಳಾಲ …

Leave a Reply

Your email address will not be published. Required fields are marked *