Breaking News

ಕೊಲ್ಕತ್ತಾ :ಅಮ್ಮ, ನಾನು ಚಿಪ್ಸ್ ಕದ್ದಿಲ್ಲ’, ಪತ್ರ ಬರೆದಿಟ್ಟು ಬಾಲಕ ಆತ್ಮಹತ್ಯೆ!

ಅಮ್ಮಾ, ನಾನು ಕದ್ದಿಲ್ಲ’ ಎಂದು ಬಾಲಕ ಬರೆದಿದ್ದ. ಹುಡುಗನ ಈ ಕೊನೆಯ ಮಾತುಗಳು ಎಂಥಾ ಕಲ್ಲು ಹೃದಯವನ್ನಾದರೂ ಕರಗಿಸುತ್ತದೆ. ಅಂದು ಭಾನುವಾರ. ಬಕುಲ್ಡಾ ಪ್ರೌಢಶಾಲೆಯ 13 ವರ್ಷದ ವಿದ್ಯಾರ್ಥಿ ಕೃಷ್ಣೇಂದು ದಾಸ್, ಸ್ವೀಟ್ ಶಾಪ್​​ನಿಂದ ಮೂರು ಪ್ಯಾಕೆಟ್ ಚಿಪ್ಸ್ ಕದ್ದ ಎಂದು ಆರೋಪ ಮಾಡಲಾಗಿತ್ತು. ಅಂಗಡಿ ಮಾಲೀಕ ಶುಭಂಕರ್ ಇಲ್ಲದ ಸಮಯದಲ್ಲಿ ಬಾಲಕ 3 ಪ್ಯಾಕೆಟ್ ಚಿಪ್ಸ್ ಕದ್ದಿದ್ದ ಎಂದು ಎಂದು ಜನರು ಹೇಳಿದ್ದರು.ಹಣ ವಾಪಸ್ ಪಡೆಯುವ ನೆಪದಲ್ಲಿ ಬಾಲಕನನ್ನು ಅಂಗಡಿಗೆ ಕರೆದುಕೊಂಡು ಹೋಗಿ ಥಳಿಸಿದ್ದಾರೆ. ಇಷ್ಟೇ ಅಲ್ಲ, ಅಂಗಡಿಯವನು ಮಗುವನ್ನು ಸಾರ್ವಜನಿಕವಾಗಿ ಕ್ಷಮೆಯಾಚಿಸುವಂತೆ ಗದರಿದ್ದಾನೆ.ಎಲ್ಲರ ಮುಂದೆ ಹೀಯಾಳಿಸಿದ ತಾಯಿ ಇಷ್ಟೆಲ್ಲಾ ಆದರೂ ಹೆತ್ತವರಾದರೂ ಬಾಲಕನ ಬೆನ್ನಿಗೆ ನಿಲ್ಲಬೇಕಿತ್ತು. ಆದರೆ, ಬಾಲಕನ ತಾಯಿಗೆ ಈ ವಿಷಯ ತಿಳಿದ ತಕ್ಷಣ, ಆಕೆ ಮತ್ತೆ ಅದೇ ಸ್ವೀಟ್ ಶಾಪ್​ಗೆ ಕರೆದೊಯ್ದು ಎಲ್ಲರ ಮುಂದೆ ಗದರಿಸಿದ್ದಾರೆ. ಇದರಿಂದ 13 ವರ್ಷದ ಬಾಲಕ ತುಂಬಾ ನೊಂದಹೋಗಿದ್ದ. ಮನೆಗೆ ಹಿಂದಿರುಗಿದ ತಕ್ಷಣ ಆತ್ಮಹತ್ಯೆಗೆ ಯತ್ನಿಸಿದ. ಗಂಭೀರ ಸ್ಥಿತಿಯಲ್ಲಿದ್ದ ಬಾಲಕನನ್ನು ತಕ್ಷಣವೇ ತಮ್ಲುಕ್ ವೈದ್ಯಕೀಯ ಕಾಲೇಜು ಆಸ್ಪತ್ರೆಗೆ ಕರೆದೊಯ್ಯಲಾಯಿತು. ಆದರೆ, ಚಿಕಿತ್ಸೆ ಫಲಿಸದೇ ಬಾಲಕ ಸಾವನ್ನಪ್ಪಿದ್ದಾನೆ.

Share News

About BigTv News

Check Also

ಇ-ಖಾತೆಗಾಗಿ ₹50 ಸಾವಿರ ಲಂಚಕ್ಕೆ ಬೇಡಿಕೆ; ಮೊದಲ ಕಂತು ಪಡೆಯುವಾಗ ನಗರಸಭೆ ಸಿಬ್ಬಂದಿ ಲೋಕಾಯುಕ್ತ ಬಲೆಗೆ

ಶಿಡ್ಲಘಟ್ಟ: ಇ-ಖಾತೆ ಮಾಡಿಕೊಡಲು ₹50 ಸಾವಿರ ಲಂಚಕ್ಕೆ ಬೇಡಿಕೆ ಇಟ್ಟು, ಮೊದಲ ಕಂತಿನ ₹25,500 ಸ್ವೀಕರಿಸುತ್ತಿದ್ದ ನಗರಸಭೆಯ ಎಸ್‌ಡಿಎ ನಾಗರಾಜ್ …

Leave a Reply

Your email address will not be published. Required fields are marked *