Breaking News

ವಿವಿಧ ರೂಪದಲ್ಲಿ ಜನರನ್ನು ಕಾಡಲಿದೆ ಮಹಾಮಾರಿ ‘ಕೊರೊನಾ’ : ಕೋಡಿಶ್ರೀ ಸ್ಪೋಟಕ ಭವಿಷ್ಯ.!

ಮಹಾಮಾರಿ ಕೊರಾನಾ ಸೋಂಕು ಹೆಚ್ಚಳವಾಗುತ್ತಿದೆ. ಅಲ್ಲಲ್ಲಿ ಸಾವು-ನೋವುಗಳು ಸಂಭವಿಸುತ್ತಿವೆ. ಇದರ ಬೆನ್ನಲ್ಲೇ ಕೋಡಿಮಠದ ಡಾ.ಶಿವಾನಂದ ಶಿವಯೋಗಿ ರಾಜೇಂದ್ರ ಸ್ವಾಮೀಜಿ ಸ್ಫೋಟಕ ಭವಿಷ್ಯ ನುಡಿದಿದ್ದಾರೆ.ಜಗತ್ತಿಗೆ ವಾಯು, ಜಲದಿಂದ ಐದು ವರ್ಷಗಳ ಕಾಲ ಗಂಡಾಂತರವಿದೆ ಎಂದು ಎಚ್ಚರಿಕೆಯನ್ನು ನೀಡಿದ್ದಾರೆ. ಹಿಮಾಲಯ ಕರಗಿ ದೆಹಲಿವರೆಗೆ ತಲುಪಿದೆ. ಮೇಘ ಸ್ಫೋಟವಾಗುವ ಸಾಧ್ಯತೆ ಇದೆ, ಭೂಕಂಪಗಳಾಗುವ ಸಾಧ್ಯತೆ ಇದೆ ಎಂದರು.ಇನ್ನು ಮತೀಯ ಗಲಭೆ ಹೆಚ್ಚಾಗಲಿದೆ. ಯುದ್ಧದ ಭೀತಿ ಮತ್ತೆ ಆರಂಭವಾಗಲಿದೆ. ಜನರಲ್ಲಿ ಅಶಾಂತಿ ಇದೆ. ಕೆಲ ದೇಶಗಳು ಅಳಿದು ಹೋಗಲಿವೆ. ಹೊಸ ಹ್ಸ ದೇಶಗಳು ಉತ್ಪತ್ತಿಯಾಗಲಿವೆ ಎಂದಿದ್ದಾರೆ.ರಾಜಕೀಯ ಮುಖಂಡರಿಗೆ ಸಾವಿದೆ. ಮುಂದಿನ ಸಂಕ್ರಾಂತಿವರೆಗೂ ರಾಜ್ಯ ಸರ್ಕಾರಕ್ಕೆ ಅಪಾಯವಿಲ್ಲ. ಸಂಕ್ರಾಂತಿ ಬಳಿಕ ಏನಾಗಲಿದೆ ನೋಡಬೇಕು ಎಂದರು.

Share News

About BigTv News

Check Also

ಬೆಂಗಳೂರಿನಲ್ಲಿ ಮತ್ತೊಂದು ನಕಲಿ ಔಷಧ ಜಾಲ ಪತ್ತೆ, 90ಕ್ಕೂ ಹೆಚ್ಚು ಆಸ್ಪತ್ರೆಗಳಿಗೆ ಪೂರೈಕೆಯಾಗಿತ್ತು ಫೇಕ್ ಮೆಡಿಸಿನ್

ಬೆಂಗಳೂರು: ಮಿನರ್ವ್ ಸರ್ಕಲ್‌ನ ಕೃಪಾ ಹೆಲ್ತ್‌ಕೇರ್‌ ಮೇಲೆ ಎಸ್‌ಐಟಿ ಹಾಗೂ ಔಷಧ ನಿಯಂತ್ರಣ ಇಲಾಖೆ ಜಂಟಿಯಾಗಿ ದಾಳಿ ನಡೆಸಿ ನಕಲಿ …

Leave a Reply

Your email address will not be published. Required fields are marked *