Breaking News

ಸಾಗರ | ಕೆಎಸ್ಸಾರ್ಟಸಿ ಬಸ್ -ಶಾಲಾ ವಾಹನ ಮುಖಾಮುಖಿ ಢಿಕ್ಕಿ: ಹಲವರಿಗೆ ಗಾಯ

ಕೆಎಸ್ಸಾರ್ಟಸಿ ಬಸ್ ಮತ್ತು ಶಾಲಾ ಬಸ್ ಮುಖಾಮುಖ ಢಿಕ್ಕಿಯಾಗಿ ಹಲವು ಮಂದಿ ಗಾಯಗೊಂಡ ಘಟನೆ ತಾಲೂಕಿನ ಇಡುವಾಣಿ ಬಳಿ ಗುರುವಾರ ಬೆಳಗ್ಗೆ ಸಂಭವಿಸಿದೆ.ಓರ್ವ ವಿದ್ಯಾರ್ಥಿ, ಎರಡು ವಾಹನಗಳ ಚಾಲಕ ಸಹಿತ ಹಲವು ಪ್ರಯಾಣಿಕರು ಗಾಯಗೊಂಡಿದ್ದಾರೆ. ಸಾಗರದಿಂದ ಕಾರ್ಗಲ್ ಮಾರ್ಗವಾಗಿ ಸಿಗಂದೂರಿಗೆ ತೆರಳುತ್ತಿದ್ದ ಕೆಎಸ್ಸಾರ್ಟಸಿ ಬಸ್ ಮತ್ತು ಖಾಸಗಿ ಶಾಲೆ ಬಸ್ ಮಧ್ಯೆ ಸಂಭವಿಸಿದೆಗಾಯಾಳುಗಳನ್ನು ಸಾಗರದ ಉಪವಿಭಾಗೀಯ ಆಸ್ಪತ್ರೆಗೆ ದಾಖಲು ಮಾಡಿ ಹೆಚ್ಚಿನ ಚಿಕಿತ್ಸೆಗಾಗಿ ಶಿವಮೊಗ್ಗಕ್ಕೆ ರವಾನಿಸಲಾಗಿದೆ. ಘಟನೆಯಲ್ಲಿ ಎರಡು ಬಸ್ ಗಳ ಮುಂಭಾಗ ಜಖಂಗೊಂಡಿದ್ದು, ಗಾಜುಗಳು ಒಡೆದಿವೆ.

Share News

About BigTv News

Check Also

ಶಾಸಕ ಉಮೇಶ್ ಮೇಟಿ ಸೊಸೆ ವಿರುದ್ಧ ಅಕ್ರಮ ಆರೋಪ; ಎಂಡಿ ಓದುವಾಗ ಸರ್ಕಾರಿ ವೈದ್ಯೆಯಾಗಿ ವೇತನ ಪಡೆದರಾ ಅಂಕಿತಾ!

ಬಾಗಲಕೋಟೆ: ಖಾಸಗಿ ಕಾಲೇಜಿನಲ್ಲಿ MD ವ್ಯಾಸಂಗ ಮಾಡುತ್ತಲೇ ‘ನಮ್ಮ ಕ್ಲಿನಿಕ್’ನಲ್ಲಿ ವೈದ್ಯಾಧಿಕಾರಿಯಾಗಿ ಕರ್ತವ್ಯ ನಿರ್ವಹಿಸದೆ ₹75 ಸಾವಿರ ಸರ್ಕಾರಿ ವೇತನ …

Leave a Reply

Your email address will not be published. Required fields are marked *