Breaking News

ಜೈ ಭೀಮ್ ಎನ್ನಲು ಸಹ ಕಾಂಗ್ರೆಸ್ ಗೆ ಅರ್ಹತೆ ಇಲ್ಲ: ಶಾಸಕ ಬಸನಗೌಡ ಪಾಟೀಲ್ ಯತ್ನಾಳ

ಹುಬ್ಬಳ್ಳಿ: ಅಂಬೇಡ್ಕರ್ ಗೆ ಇಷ್ಟು ದಿನ ಅಪಮಾನ ಮಾಡಿ ಈಗ ಅಂಬೇಡ್ಕರ್ ಹೆಸರಿನಲ್ಲಿ ಕಾಂಗ್ರೆಸ್ ಕಾರ್ಯಕ್ರಮ ಮಾಡುತ್ತಿದ್ದು, ಜೈ ಭೀಮ್ ಎನ್ನಲು ಸಹ ಕಾಂಗ್ರೆಸ್ ಗೆ ಅರ್ಹತೆ ಇಲ್ಲ ಎಂದು ಶಾಸಕ ಬಸನಗೌಡ ಪಾಟೀಲ್ ಯತ್ನಾಳ ತಿಳಿಸಿದ್ದಾರೆ.

ಹುಬ್ಬಳ್ಳಿಯಲ್ಲಿ ಮಾತನಾಡಿದ ಅವರು, ಗೊಡ್ಸೆ ಹೊಡೆದಿದ್ದು ಒಂದು ಗುಂಡು ಆದ್ರೆ ಇನ್ನೂ ಎರಡು ಗುಂಡು ಯಾರವು?ಗಾಂಧಿ ಹತ್ಯೆಯಲ್ಲಿ ನೆಹರು ಪಾತ್ರವಿದೆ, ಇನ್ನೂ ಎರಡು ಗುಂಡು ಹೊಡೆಸಿದ್ದು ನೆಹರು ಎಂದು ತಿಳಿಸಿದರು.

ನಮ್ಮ ವಿರೋಧಿ ಬಣ ದೆಹಲಿಗೆ ಅಲ್ಲಾ ಬೇಕಿದ್ರೆ ವಾಷಿಂಗ್ಟನ್ ಹೋಗಲಿ ಸತ್ಯ ಸತ್ಯವೇ, ಈ ಬಗ್ಗೆ ಲೋಫರ್, ಜೇಬುಗಳ್ಳರ ಹೇಳಿಕೆ ಯಾಕೆಪಡಿತ್ತಿರಿ‌‌. ಬೇಕಿದ್ದರೆ ವಿಜಯೇಂದ್ರ ಅಪ್ಪನ ಹೇಳಿಕೆ ಪಡೆಯಿರಿ ನಾವು ವಿಜಯೇಂದ್ರನ ಅಪ್ಪನಂತೆ ಅವರು ಬೇಕಾದ್ದು ಮಾಡಲಿ ಎದುರಿಸಲು ಸಿದ್ಧ ಅವರನ್ನಪ್ಪ ಸಹಿ ನಕಲು ಮಾಡಿದವರಿಗೆ ಏನು ಹೇಳಬೇಕು? ಯಡಿಯೂರಪ್ಪ ಸಿಎಂ ಆಗಿದ್ದಾಗ ಎಷ್ಟು ನಕಲಿ ಸಹಿಗಳಾಗಿವೆ ತನಿಖೆ ಆಗಲಿ, ಸಿದ್ದರಾಮಯ್ಯ ಅವರಿಗೆ ತಾಕತ್ತು ಇದ್ರೆ ಯಡಿಯೂರಪ್ಪ ಸಿಎಂ ಆಗಿದ್ದಾಗ ಯಾವ ಯಾವ ಸಹಿ ಮಾಡಿದ್ದಾರೆ ಅದು ತನಿಖೆ ಆಗಲಿ. ನಾವು ರಾಜ್ಯಾಧ್ಯಕ್ಷರ ಚುನಾವಣೆಗೆ ಸಿದ್ಧವಾಗಿದ್ದಿವಿ ನಾವು ನಮ್ಮ ಅಭ್ಯರ್ಥಿ ಹಾಕತ್ತವಿ. ಹೈಕಮಾಂಡ್ ಮಧ್ಯಪ್ರವೇಶ ಮಾಡಿದ ಚುನಾವಣೆ ಮಾಡಬೇಕು ಇನ್ನೊಂದು ಡೂಬ್ಲಿಕೇಟ್ ಸಹಿ ಮಾಡಿ ರಾಜ್ಯ ಕೊಳ್ಳೆ ಹೊಡೆಯುವ ಆಸೆ ಇದೆಯಾ? ಅಂತ ವಿಜಯೇಂದ್ರ ವಿರುದ್ಧ ಏಕವಚನದಲ್ಲಿ ಯತ್ನಾಳ ವಾಗ್ದಾಳಿ ನಡೆಸಿದರು.

ಮುಡಾ ಹಗರಣದಲ್ಲಿ ಯಾರು ಸಾಚಾ ಇಲ್ಲ ಈ ಕುರಿತು ಮಾತನಾಡಿದ ಅವರು, 185 ಕೋಟಿ ವಾಲ್ಮೀಕಿ ಹಗರಣವನ್ನು ಸಿಎಂ ಒಪ್ಪಿಕೊಳ್ಳ್ತಾರೆ. ಕೇಂದ್ರ ಸರ್ಕಾರದ ಯಾರನ್ನು ಟಾರ್ಗೆಟ್ ಮಾಡಿಲ್ಲ ಆದರೆ ರಾಜ್ಯದಲ್ಲಿ ನನ್ನ ಮತ್ತು ಸಿಟಿ ರವಿ ಟಾರ್ಗೆಟ್ ಮಾಡಿದ್ದಾರೆ. ಹಿಂದೂಗಳ ಪರವಾಗಿ ಮಾತನಾಡಿದ್ರೆ ಕೇಸ್ ಹಾಕತ್ತಾರೆ ಆದರೆ ವಿಜಯೇಂದ್ರ ಮೇಲೆ ಪ್ರಕರಣ ದಾಖಲು ಮಾಡಲ್ಲ. ಹಿಂದೂಗಳ ಭಾವನೆ ಕೇರಳಿಸಿ , ರಾಜ್ಯದ ದಂಗೆ ಏಳಿಸಲು ಕಾಂಗ್ರೆಸ್ ಪ್ರಯತ್ನ ಮಾಡುತ್ತಿದೆ. ಇಷ್ಟು ಧೈರ್ಯ ಮುಸ್ಲಿಂ ಸಮುದಾಯ ಹೇಗೆ ಬಂದಿದೆ. ಈ ಹಿಂದೆ ನಮ್ಮ ಬಿಜೆಪಿ ಅಧಿಕಾರದಲ್ಲಿ ಏನು ಮಾಡಿಲ್ಲ ನಾವು ಸಹ ಈ ವಿಚಾರದಲ್ಲಿ ತಪ್ಪು ಮಾಡಿದ್ದೆವೆ. ನಮ್ಮ ಸರ್ಕಾರದಲ್ಲಿ ಕಟ್ಟು ನಿಟ್ಟಿನ ಕ್ರಮ ತೆಗೆದುಕೊಂಡಿದ್ರೆ ಈ ರೀತಿ ಘಟನೆಗಳು ಆಗುತ್ತಿರಲಿಲ್ಲ ಎಂದರು.

Share News

About Shaikh BigTv

Check Also

ಉಡುಪಿ: ಎಂಬ್ರಾಯ್ಡರಿ ಅಂಗಡಿಗೆ ನುಗ್ಗಿ ಮಾಲಕನ ಮೇಲೆ ಆಸಿಡ್ ದಾಳಿ!

ಉಡುಪಿ: ಬಾಡಿಗೆ ಮನೆಯ ಠೇವಣಿ ಹಣ ಮರಳಿ ನೀಡದ ವಿಚಾರಕ್ಕೆ ಸಂಬಂಧಿಸಿದ ವಿವಾದದ ಹಿನ್ನೆಲೆಯಲ್ಲಿ ಎಂಬ್ರಾಯ್ಡರಿ ಅಂಗಡಿ ಮಾಲಕನ ಮೇಲೆ …

Leave a Reply

Your email address will not be published. Required fields are marked *