ಬಿಜನಗೇರಾ ಗ್ರಾಮದಲ್ಲಿ ರವಿವಾರ ಶ್ರೀ ಆಂಜನೇಯ ಸ್ವಾಮಿ ದೇವಸ್ಥಾನದ ಲೋಕಾರ್ಪಣೆ ಪ್ರಯುಕ್ತ ರವಿವಾರ ಆಯೋಜಿಸಿದ್ದ ಗರುಡಗಂಬ ಪ್ರತಿಷ್ಠಾಪನೆ ವೇಳೆಯೇ ಮುರಿದು ಬಿದ್ದ ಘಟನೆ ನಡೆದಿದೆ. ಶ್ರೀ ಆಂಜನೇಯ ಸ್ವಾಮಿ ಮೂರ್ತಿ ಪ್ರತಿಷ್ಠಾಪನೆ, ಗರುಡಗಂಬ ಪ್ರತಿಷ್ಠಾಪನೆ, ಗೋಪುರ ಮತ್ತು ಕಳಸ ಪೂಜೆ ಸೇರಿ ಇತ್ಯಾದಿ ಪೂಜಾ ಕಾರ್ಯಗಳನ್ನು ಹಮ್ಮಿಕೊಳ್ಳಲಾಗಿತ್ತು. ಬೆಳಗ್ಗೆ ಕ್ರೇನ್ ನೆರವಿನೊಂದಿಗೆ ಗರುಡಗಂಬ ನಿಲ್ಲಿಸುವಾಗ ಮುರಿದು ಬಿದ್ದಿದೆ. ಈ ವೇಳೆ ಶಾಸಕ ಡಾ.ಶಿವರಾಜ ಪಾಟೀಲ್ ಸೇರಿದಂತೆ ವಿವಿಧ ಗಣ್ಯರು, ಸ್ವಾಮೀಜಿಗಳು ಪಾಲ್ಗೊಂಡಿದ್ದರು. ಯಾವುದೇ ಹಾನಿ ಸಂಭವಿಸಿಲ್ಲ
bigtvnews | Hubli Dharwad News | Kannada News | Karnataka News Hubli News | News In Hubli | Local news

