Breaking News

ಮಧ್ಯಪ್ರದೇಶ :ಕೊಲೆಯಾದ ಮಹಿಳೆ 18 ತಿಂಗಳ ಬಳಿಕ ಪ್ರತ್ಯಕ್ಷ!!

18 ತಿಂಗಳ ಹಿಂದೆ ಝುಬಾವ ಜಿಲ್ಲೆಯಲ್ಲಿ ಪೊಲೀಸರಿಗೆ ವಿರೂಪಗೊಂಡ ಮಹಿಳೆ ಶವ ಪತ್ತೆಯಾಗಿದೆ. ಶವ ಪತ್ತೆ ಬಗ್ಗೆ ತನಿಖೆ ಆರಂಭಿಸಿದ ಪೊಲೀಸರು ಕಾಣೆಯಾದ ಕುಟುಂಬಗಳಿಗೆ ಮಾಹಿತಿ ನೀಡಿದ್ದಾರೆ. ಇದರಲ್ಲೊಂದು ಕುಟುಂಬ ಶವ ಗುರುತಿಸಿ ಕೊನೆಗೆ ಪೊಲೀಸರ ನೇತೃತ್ವದಲ್ಲಿ ಶವಸಂಸ್ಕಾರ ಮಾಡಿದ್ದಾರೆ. ಇತ್ತ ತನಿಖೆ ಚುರುಕುಗೊಳಿಸಿದ ಪೊಲೀಸರು ಕೊನೆಗೂ ನಾಲ್ವರನ್ನು ಬಂಧಿಸಿ ಸಾಕ್ಷ್ಯಧಾರಗಳ ಮೇಲೆ ಕೋರ್ಟ್​ಗೆ ಒಪ್ಪಿಸಿದ್ದಾರೆ.ಒಂದುವರೆ ವರ್ಷದ ಹಿಂದೆ ಕೊಲೆಯಾಗಿದ್ದ ಮಹಿಳೆ ಬಗ್ಗೆ ತನಿಖೆ ಆರಂಭಿಸಿದ ಪೋಲಿಸರು ಕೊಲೆ ಆರೋಪದ ಮೇಲೆ ನಾಲ್ವರನ್ನು ಬಂಧಿಸಲಾಗಿದೆ. ಅಲ್ಲದೆ ಈ ಪ್ರಕರಣ ನ್ಯಾಯಾಲಯದಲ್ಲಿ ವಿಚಾರಣೆ ಕೊನೆ ಹಂತದಲ್ಲಿದ್ದಾಗ ಮಹಿಳೆ ಕೋರ್ಟ್​ ಮತ್ತು ಠಾಣೆ ಎದುರಿಗೆ ಪ್ರತ್ಯಕ್ಷಳಾಗಿದ್ದಾಳೆ.

Share News

About BigTv News

Check Also

ಬೆಂಗಳೂರಿನಲ್ಲಿ ಮತ್ತೊಂದು ನಕಲಿ ಔಷಧ ಜಾಲ ಪತ್ತೆ, 90ಕ್ಕೂ ಹೆಚ್ಚು ಆಸ್ಪತ್ರೆಗಳಿಗೆ ಪೂರೈಕೆಯಾಗಿತ್ತು ಫೇಕ್ ಮೆಡಿಸಿನ್

ಬೆಂಗಳೂರು: ಮಿನರ್ವ್ ಸರ್ಕಲ್‌ನ ಕೃಪಾ ಹೆಲ್ತ್‌ಕೇರ್‌ ಮೇಲೆ ಎಸ್‌ಐಟಿ ಹಾಗೂ ಔಷಧ ನಿಯಂತ್ರಣ ಇಲಾಖೆ ಜಂಟಿಯಾಗಿ ದಾಳಿ ನಡೆಸಿ ನಕಲಿ …

Leave a Reply

Your email address will not be published. Required fields are marked *