ಮನೆಯ ಬಳಿ ಗ್ಯಾಸ್ ಸಿಲಿಂಡರ್ ವಾಹನ ತಂದು ನಿಲ್ಲಿಸಿ, ಮನೆ ಬಾಗಿಲು ಬಡಿದು ಗ್ಯಾಸ್ ಸಿಲಿಂಡರ್ ತೆಗೆದುಕೊಳ್ಳಿ ಎಂದಿದ್ದ. ಆಗ ಮಹಿಳೆ ತಾನು ಸಿಲಿಂಡರ್ ಬುಕ್ ಮಾಡಿಲ್ಲ ಎಂದು ಹೇಳಿದ್ದಾಳೆ. ಆದರೂ ಕೇಳದ ಆರೋಪಿ ಗ್ಯಾಸ್ ಖಾಲಿಯಾಗಿದ್ದರೆ ತೆಗೆದುಕೊಳ್ಳಿ ಎಂದು ಒತ್ತಾಯಿಸಿದ್ದಾನೆ. ಇದಕ್ಕೆ ಮಹಿಳೆ ಒಪ್ಪಿ 950 ರೂ. ನೀಡಿ ಸಿಲಿಂಡರ್ ಪಡೆದಿದ್ದಾರೆ.ಅಷ್ಟಕ್ಕೆ ಸ್ಥಳದಿಂದ ಹೋಗದ ಆಸಾಮಿ ಮಹಿಳೆಯನ್ನು ಯಾಮಾರಿಸಿದ್ದಾನೆ. ಆತನ ಮಾತನ್ನು ನಂಬಿ ಮಹಿಳೆ ಮನೆಯೊಳಗೆ ಬಿಟ್ಟಿದ್ದಾಳೆ.ಮಹಿಳೆಯನ್ನು ಅಡುಗೆ ಮನೆಗೆ ಕರೆಸಿದ ಆರೋಪಿ ಆಕೆಯನ್ನು ಸಿಲಿಂಡರ್ ಬಳಿ ನಿಲ್ಲಿಸಿ ಫೋಟೋ ತೆಗೆದುಕೊಂಡಿದ್ದಾನೆ. ನಿಮ್ಮ ದಾಖಲೆ ಇ-ಕೆವೈಸಿ ಮಾಡಬೇಕು ಎಂದು ಹೇಳಿ ಸಲುಗೆ ಹೆಚ್ಚಿಸಲು ಯತ್ನಿಸಿ, ಏಕಾಏಕಿ ಅತ್ಯಾಚಾರಕ್ಕೆ ಯತ್ನಿಸಿದ್ದಾನೆ. ಸಹಕರಿಸದಿದ್ದರೆ ಕೊಲೆ ಮಾಡುವುದಾಗಿ ಬೆದರಿಕೆಯನ್ನೂ ಹಾಕಿದ್ದಾನೆ. ಮಹಿಳೆ ಪ್ರತಿರೋಧ ತೋರಿದ್ದಕ್ಕೆ ಅಲ್ಲೇ ಇದ್ದ ಚಾಕುವಿನಿಂದ ಹಲ್ಲೆ ಮಾಡಿದ್ದಾನೆ ಎಂದು ಮಹಿಳೆ ಆರೋಪಿಸಿದ್ದಾರೆ
bigtvnews | Hubli Dharwad News | Kannada News | Karnataka News Hubli News | News In Hubli | Local news

