Breaking News

ಬಡ್ಡಿ ಕಿರುಕುಳಕ್ಕೆ ಆತ್ಮಹತ್ಯೆ ಸರ್ಕಾರದ ಕಾನೂನು ಬಿಳಿ ಪೇಪರ್ ಗೆ ಸಿಮಿತ ಆಯ್ತಾ…???

ಹುಬ್ಬಳ್ಳಿ : ಅವಳಿ ನಗರದಲ್ಲಿ ಮನಕುಲಕುವ ಘಟನೆ ನಡೆದಿದ್ದು ಒಬ್ಬ ವ್ಯಕ್ತಿ ಆತ್ಮಹತ್ಯೆ ಮಾಡಿಕೊಳ್ಳುವ ಮಟ್ಟಕ್ಕೆ ಬಡ್ಡಿ ಕಿರುಕುಳ ನೀಡಿರುವದು ಹುಬ್ಬಳ್ಳಿಯ
ಎಸ್ ಎಂ ಕೃಷ್ಣ ನಗರದಲ್ಲಿ ನಡೆದಿದೆ.

ಬಾಷಾ ಸಾಬ್ ಸಂಕೇಶ್ವರ್ (65) ಆತ್ಮಹತ್ಯೆ ಮಾಡಿಕೊಂಡ ವ್ಯಕ್ತಿ.ಮನೆಯಲ್ಲಿ ಬಡತನ ಇದ್ದರು ದುಡಿದು ಬದಕುವ ಚಲ‌ ಬಿಡದ ಈ ವ್ಯಕ್ತಿ
ಕಳೆದ ಹಲವು ದಿನಗಳಿಂದ ಬಾಷಾ ಸಾಬ್ ನಾಲ್ಕೈದು ಜನರ ಬಳಿ ಕೈಗಡ ಸಾಲ ಪಡೆದಿದ್ದನಂತೆ. ಅದರಂತೆಯೇ ಹಣ ವಾಪಸ್ ನೀಡೋದಾಗಿ ಲಲಿತಾ, ಕಿಟ್ಯಾ, ವಿನೋದ… ಅಷ್ಪಕ್ ರಿಂದ ಕಿರುಕುಳ ನೀಡುತ್ತಿದ್ದರಂತೆ.‌ ಅಲ್ದೇ ಲಲಿತಾ, ಕಿಟ್ಯಾ ರಿಂದ ದಿನ ದುಡಿಯುವ ಆಟೋ ಸಹ ಕಿತ್ತುಕೊಳ್ಳುವ ಮೂಲಕ‌ ನಿರಂತರ ಕಿರುಕುಳ‌ ನೀಡುತ್ತಿದ್ದರು ಎಂದು ಮೃತ ವ್ಯಕ್ತಿ ವೀಡಿಯೋ ಮೂಲಕ‌ ಆರೋಪ ಮಾಡಿದ್ದಾನೆ.

https://www.facebook.com/share/v/19B2Qdrfww/?mibextid=D5vuiz

ಇನ್ನು ಗಾರ್ಡನ್ ಪೇಟೆಯಲ್ಲಿನ ಮನೆ ಮಾರುವ ವಿಚಾರದಲ್ಲೂ ಕೂಡ ಬಾಷಾ ಗೆ ಮೋಸ ಮಾಡಿರುವ ಆರೋಪ ಮಾಡಿದ್ಸು, ಕಾಂಗ್ರೆಸ್ ಮುಖಂಡ… ನೇತೃತ್ವದಲ್ಲಿ ಸಾಲ ಪಡೆದಿದ್ದರ ಬಗ್ಗೆ ಮಾತುಕತೆ ಸಹ ನಡೆದಿತ್ತಂತೆ.‌‌
1.80 ಲಕ್ಷಕ್ಕೆ ನಡೆದಿದ್ದ ಮಾತುಕತೆ ವಿಚಾರವನ್ನ ವಿಡಿಯೋದಲ್ಲಿ ತಿಳಿಸಿರೋ ಬಾಷಾ. ಯಾವುದೇ ರೀತಿಯಾಗಿ ಹಣ ನೀಡಿದೇ ಮಾನಸಿಕ ಕಿರುಕುಳದಿಂದಲೂ ನೊಂದಿದ್ದ ಎನ್ನಲಾಗಿದೆ.‌ಇನ್ನು
ಮನೆಗೆ ಖರೀದಿಸಿದ್ದ ಸೀರಾಜ್ ಮಿರ್ಜಿಯಿಂದ ಹಾಗೂ
ಈತನೊಂದಿಗೆ ಬಶೀರ್ ಎಂಬುವವರಿಂದಲೂ ಸಹ ಹಲ್ಲೆ ಹಾಗೂ ಧಮಕಿ ಹಾಕಿರೋದಾಗಿ ವೀಡಿಯೋದಲ್ಲಿ ಆರೋಪ ಮಾಡಿದ್ದಾನೆ. ಹೀಗಾಗಿ ಸಾಲಗಾರರಿಂದ ಬೇಸತ್ತು ವೀಡಿಯೋ ಮಾಡಿ ಪೋಲಿಸ್ ಆಯುಕ್ತ ಎನ್ ಶಶಿಕುಮಾರ ಅವರಿಗೆ ಮನವಿ ಮಾಡಿ ನ್ಯಾಯ ಒದಗಿಸುವಂತೆ ಕೋರಿ ಆತ್ಮಹತ್ಯೆ ಶರಣಾದ ಭಾಷಾ.

ನಿನ್ನೆ ರಾತ್ರಿ 8 ಗಂಟೆಯ ವೇಳೆಗೆ ಕುಟುಂಬಸ್ಥರ ಸಂಬಂಧಿಕರ ಮನೆಯ ಕಾರ್ಯಕ್ರಮದಲ್ಲಿ ತೆರಳಿದಾಗ ಆತ್ಮಹತ್ಯೆ ಗೆ ಶರಣಾಗಿದ್ದಾನೆ…..

Share News

About Shaikh BigTv

Check Also

ವಿಟ್ಲ: 35 ಬಾರಿ ವಾರಂಟ್ ಜಾರಿಯಾಗಿದ್ದ ಆರೋಪಿ ಮಂಗಳೂರು ವಿಮಾನ ನಿಲ್ದಾಣದಲ್ಲಿ ಬಂಧನ

ಕಳೆದ ಒಂಬತ್ತು ವರ್ಷಗಳಿಂದ ವಿವಿಧ ಅಪರಾಧ ಪ್ರಕರಣಗಳಲ್ಲಿ ಭಾಗಿಯಾಗಿ, ನ್ಯಾಯಾಲಯದ ವಿಚಾರಣೆಗೆ ಹಾಜರಾಗದೆ ವಿದೇಶದಲ್ಲಿ ತಲೆಮರೆಸಿಕೊಂಡಿದ್ದ ಕುಖ್ಯಾತ ಆರೋಪಿಯನ್ನು ವಿಟ್ಲ …

Leave a Reply

Your email address will not be published. Required fields are marked *