ಕೀರ್ತಿ ಅವರು ರಾತ್ರಿ ವೇಳೆ ದೈವಸ್ಥಾನದ ಬಳಿ ಹೋದಾಗ ಅಲ್ಲಿ ಓರ್ವ ವ್ಯಕ್ತಿಯು ದೈವಸ್ಥಾನದ ಬಾಗಿಲಿನ ಬೀಗವನ್ನು ಒಡೆದು ಅಲ್ಲಿ ಜಾಲಾಡಿ ಏನೂ ಸಿಗದೆ, ಕಾಣಿಕೆ ಡಬ್ಬಿಯನ್ನು ಒಡೆಯಲು ಪ್ರಯತ್ನಿಸುತ್ತಿದ್ದನು. ಕೀರ್ತಿ ಅವರು ಕೂಡಲೇ ತನ್ನ ಪರಿಚಿತರೊಬ್ಬರಿಗೆ ಕರೆ ಮಾಡಿ ದೈವಸ್ಥಾನದ ಬಳಿ ಬರುವಂತೆ ತಿಳಿಸಿ ಕಳ್ಳನನ್ನು ರೆಡ್‌ಹ್ಯಾಂಡ್ ಆಗಿ ಹಿಡಿದರು.ವಿಚಾರಿಸಿದಾಗ ಈತ ಗದಗ ಮೂಲದ ಹನುಮಂತರಾಯ ಯಾನೆ ಗೌಡನಗೌಡ ಎಂದು ತಿಳಿದು ಬಂದಿದೆ. ಬಳಿಕ ಆತನನ್ನು ಕಡಬ ಪೊಲೀಸರಿಗೆ ಒಪ್ಪಿಸಿದಾಗ ಕಳ್ಳತನ ಮಾಡಲು ಯತ್ನಿಸಿರುವುದಾಗಿ ಒಪ್ಪಿ ಕೊಂಡಿದ್ದಾನೆ. ಪೊಲೀಸರು ಪ್ರಕರಣ ದಾಖಲಿಸಿಕೊಂಡಿದ್ದಾರೆ.
bigtvnews | Hubli Dharwad News | Kannada News | Karnataka News Hubli News | News In Hubli | Local news

