ಒಂದೇ ತಿಂಗಳ ಅವಧಿಯಲ್ಲಿ ಜಿಲ್ಲೆಯಲ್ಲಿ ಇಬ್ಬರನ್ನು ಹುಲಿ ತಿಂದು ಹಾಕಿದೆ. ಇದರಿಂದ ರೊಚ್ಚಿಗೆದ್ದ ಸ್ಥಳೀಯರು, ಹಸುವಿನ ಕಳೇಬರಕ್ಕೆ ವಿಷಹಾಕಿ ಹುಲಿಗಳನ್ನ ಕೊಂದಿರೋ ಶಂಕೆ ಇದೆ. ಯಳಂದೂರಿನ ಬಿಳಿಗಿರಿರಂಗನ ಬೆಟ್ಟ ವ್ಯಾಪ್ತಿಯ ರಾಮಯ್ಯನಪೋಡು ಬಳಿ ರಂಗಮ್ಮ ಎಂಬ ವೃದ್ಧೆಯನ್ನ ಹುಲಿ ಕೊಂದಿತ್ತು. ಇದರಿಂದ ಸ್ಥಳೀಯುರ ಬೆಚ್ಚಿಬಿದ್ದಿದ್ದರು. ಆ ಘಟನೆಯ ಕಹಿ ನೆನೆಪು ಮಾಸುವ ಮುನ್ನವೇ ಪುಟ್ಟಮ್ಮ ಹುಲಿ ದಾಳಿಗೆ ಸಾವನ್ನಪ್ಪಿದ್ದರು. ಇದೇ ಸೇಡಿಗೆ ಜನರು ಹುಲಿಗಳನ್ನ ಬಲಿಪಡೆದುಕೊಂಡಿರಬಹುದು ಎಂದು ಶಂಕಿಸಲಾಗಿದೆ.ಹಸುವಿನ ಮಾಂಸಕ್ಕೆ ವಿಷ ಬೆರೆಸಿರುವ ಸಾಧ್ಯತೆಗಳಿದ್ದು, ವಿಷ ಬೆರೆಸಿದ ಹಸುವಿನ ಮಾಂಸವನ್ನು ಹುಲಿ ತನ್ನ ನಾಲ್ಕು ಮರಿಗಳೊಂದಿಗೆ ಭಕ್ಷಿಸಿದಾಗ ಸಾವೀಗಿಡಾಗಿರುವ ಸಾಧ್ಯತೆಗಳಿವೆ.ಹೂಗ್ಯಂ ವಲಯದಲ್ಲಿ ಐದು ಹುಲಿಗಳು ಸಾವನ್ನಪ್ಪಿದ್ದು, ವಿಷ ಪ್ರಾಷನದಿಂದ ಹುಲಿಗಳು ಸಾವನ್ನಪ್ಪಿವೆ ಎನ್ನಲಾಗುತ್ತಿದೆ.
bigtvnews | Hubli Dharwad News | Kannada News | Karnataka News Hubli News | News In Hubli | Local news

