ಹುಬ್ಬಳ್ಳಿಯ ಸೆಟ್ಲಿಮೆಂಟ್ ಶ್ಯಾಮ್ ಜಾಧವ ಆ್ಯಂಡ್ ಮಂಟೂರ ರೋಡ್ MD ದಾವುದ್ ಬ್ರದರ್ಸ್ ನಡುವೆ ತಲ್ವಾರದಿಂದ ಗ್ಯಾಂಗ್ ವಾರ್ ನಡೆದಿದೆ. ಮಂಟೂರ ರೋಡ್‌ಗೆ ಶವ ಸಂಸ್ಕಾರಕ್ಕೆಂದು ತೆರಳಿದ್ದಾಗ ಮಾತಿಗೆ ಮಾತು ಬೆಳೆದು ಎರಡು ಗ್ಯಾಂಗ್‌ಗಳ ನಡುವೆ ಹೊಡೆದಾಟ ನಡೆದಿದೆ. ಬಾಟಲ್, ತಲ್ವಾರ್ ದಿಂದ ಹೊಡೆದಾಡಿಕೊಂಡ ಎರಡೂ ಗ್ಯಾಂಗ್‌ಗಳು, ಹೊಡೆದಾಟದಲ್ಲಿ ಹಲವರಿಗೆ ಗಾಯ, ಕಿಮ್ಸ್‌ಗೆ ದಾಖಲುಮಾಡಿದ್ದಾರೆ. ಗಾಯಗೊಂಡವರ ಸಂಬಂಧಿ ಪಾಲಿಕೆ ಸದಸ್ಯೆ ಮಂಜುಳಾ ಜಾಧವ ಪ್ರತಿಕ್ರಿಯೆ ನೀಡಿದ್ದಾರೆ.ನಾವು ಎಲ್ಲರೂ ಸೇರಿ ಶವಸಂಸ್ಕಾರಕ್ಕೆ ಹೋಗಿದ್ವಿ ಏಕಾಏಕಿ ಮೈಮೇಲೆ ಬಂದು ಹೊಡೆದಿದ್ದಾರೆ.ಸೋಡಾ ಬಾಟಲ್, ತಲ್ವಾರ್, ಹಾರಿಯಿಂದ ಹಲ್ಲೆ ಮಾಡಿದ್ದಾರೆ.30 ರಿಂದ 40 ಹೆಣ್ಣು ಮಹಿಳೆಯರೇ ಇದ್ರು
ಮಂಜುನಾಥ್ ಗಾಯಕವಾಡ, ರಾಜೇಶ ಕೊರವರ ಇಬ್ಬರಿಗೆ ಗಾಯ ಆಗಿದೆ. ಶಹರ ಪೊಲೀಸ್ ಠಾಣಾ ವ್ಯಾಪ್ತಿಯಲ್ಲಿ ಘಟನೆ ನಡೆದಿದೆ.
bigtvnews | Hubli Dharwad News | Kannada News | Karnataka News Hubli News | News In Hubli | Local news

