ಶಿವಶಂಕರ್ ಮಿತ್ರ ಅವರು ಬಾರಾಮತಿಯಲ್ಲಿರುವ ರಾಷ್ಟ್ರೀಕೃತ ಬ್ಯಾಂಕ್ ಒಂದರಲ್ಲಿ ಹಿರಿಯ ಮ್ಯಾನೇಜರ್ ಆಗಿ ಹಲವು ವರ್ಷಗಳಿಂದ ಕರ್ತವ್ಯ ನಿರ್ವಹಿಸುತ್ತಿದ್ದರು ಈ ನಡುವೆ ತಮ್ಮ ಸಿಬ್ಬಂದಿಗಳಿಗೆ ಬೇಗ ಬೇಗ ಕೆಲಸ ಮುಗಿಸಿ ಮನೆಗೆ ತೆರಳುವಂತೆ ತಿಳಿಸಿದ್ದಾರೆ ಇದಾದ ಬಳಿಕ ರಾತ್ರಿ ಒಂಬತ್ತು ಗಂಟೆಗೆ ಕಾವಲುಗಾರನನ್ನೂ ಮನೆಗೆ ಕಳುಹಿಸಿದ್ದ ಮ್ಯಾನೇಜರ್ ಮಧ್ಯರಾತ್ರಿ ಕಚೇರಿ ಒಳಗಿರುವ ಫ್ಯಾನ್ ಗೆ ಹಗ್ಗದಿಂದ ನೇಣು ಬಿಗಿದು ಆತ್ಮಹ*ತ್ಯೆಗೆ ಶರಣಾಗಿದ್ದಾರೆ.ನೇಣು ಬಿಗಿದುಕೊಂಡಿದ್ದ ಮಿತ್ರ ಅವರನ್ನು ಕೂಡಲೇ ಆಸ್ಪತ್ರೆಗೆ ಸಾಗಿಸಿ ಪರಿಶೀಲಿಸಿದ ವೇಳೆ ಮೃತಪಟ್ಟಿರುವುದು ದೃಢಪಟ್ಟಿದೆ ಬಳಿಕ ಪೊಲೀಸರಿಗೆ ಮಾಹಿತಿ ನೀಡಿದ್ದು ಪೊಲೀಸರು ಬಂದು ಪರಿಶೀಲನೆ ನಡೆಸಿದ ವೇಳೆ ಆತ್ಮಹತ್ಯೆ ಮಾಡಿಕೊಂಡ ಜಾಗದಲ್ಲಿ ಡೆತ್ ನೋಟ್ ಪತ್ತೆಯಾಗಿತ್ತು ಅದರಲ್ಲಿ ವಿಪರೀತ ಕೆಲಸದ ಒತ್ತಡದಿಂದ ನಾನು ಈ ನಿರ್ಧಾರಕ್ಕೆ ಬಂದಿದ್ದಾಗಿ, ಅಲ್ಲದೆ ಇದರ ಹಿಂದೆ ಯಾವುದೇ ವ್ಯಕ್ತಿಯ ಕೈವಾಡ ಇಲ್ಲ ಎಂದು ಬರೆದುಕೊಂಡಿದ್ದಾರೆ.
bigtvnews | Hubli Dharwad News | Kannada News | Karnataka News Hubli News | News In Hubli | Local news

