Breaking News

ಅಣ್ಣನ ಮೇಲಿನ ಸೇಡಿಗೆ ಮಗನನ್ನೇ ಬಲಿ ಪಡೆದ: 3 ವರ್ಷದ ಬಾಲಕನ ಕತ್ತು ಕೊಯ್ದ ಚಿಕ್ಕಪ್ಪ!

ಅಂಗನವಾಡಿಗೆ ಹೋಗಿದ್ದ 3 ವರ್ಷದ ಮಗುವಿಗೆ ಜಾಕು ಇರಿದು ಸ್ವಂತ ಚಿಕ್ಕಪ್ಪನೇ ಜೀವ ತೆಗೆದಿರುವ ಘಟನೆ ಬಾಗಲಕೋಟೆ ಜಿಲ್ಲೆಯ ಇಳಕಲ್ ತಾಲೂಕಿನ ಬೆನಕನವಾಡಿ ಗ್ರಾಮದಲ್ಲಿ ನಡೆದಿದೆ. ಅಣ್ಣ ಬೈದು ಬುದ್ಧಿವಾದ ಹೇಳಿದ್ದಕ್ಕೆ ತಮ್ಮ ಈ ಕೃತ್ಯ ಎಸಗಿದ್ದಾನೆ.ಆಡವಾಡುತ್ತಿದ್ದ ಒಟ್ಟು ನಾಲ್ಕು ಮಕ್ಕಳನ್ನು ಭೀಮಪ್ಪ ತನ್ನ ಮನೆಗೆ ಕರೆದೊಯ್ದಿದ್ದ.ಮಕ್ಕಳನ್ನು‌ ಮನೆಯಲ್ಲಿ ಹಾಸಿಗೆ ಮೇಲೆ‌ ಮಲಗಿಸಿ ಸಾಮೂಹಿಕ ಕೊಲೆಗೆ ಮುಂದಾಗಿದ್ದ ಎಂಬ ಸಂಶಯವಿದೆ.ಮಗು ಮದುಕುಮಾರ ಕತ್ತಿಗೆ ಚಾಕು ಇರಿಯುತ್ತಲೇ ಚೀರಾಟ ಕೇಳಿ ಉಳಿದ ಮಕ್ಕಳು ಎದ್ದು ಹೊರಗೆ ಓಡಿ ಬಂದಿದ್ದಾರಂತೆ‌.ಇದನ್ನು ನೆರೆಹೊರೆಯವರು ನೋಡಿದ್ದು,ಮಗು ಮದುಕುಮಾರ ತಾಯಿ ಕೂಡ ಈ ಬಗ್ಗೆ ಹೇಳಿದ್ದಾಳೆ. ವಿಷಯ ತಿಳಿಯುತ್ತಿದ್ದಂತೆಯೇ ಸ್ಥಳಕ್ಕೆ ಎಸ್ ಪಿ ಭೇಟಿ ನೀಡಿ ತನಿಖೆ ಚುರುಕುಗೊಳಿಸಿದ್ದಾರೆ.

Share News

About BigTv News

Check Also

ಶಾಸಕ ಉಮೇಶ್ ಮೇಟಿ ಸೊಸೆ ವಿರುದ್ಧ ಅಕ್ರಮ ಆರೋಪ; ಎಂಡಿ ಓದುವಾಗ ಸರ್ಕಾರಿ ವೈದ್ಯೆಯಾಗಿ ವೇತನ ಪಡೆದರಾ ಅಂಕಿತಾ!

ಬಾಗಲಕೋಟೆ: ಖಾಸಗಿ ಕಾಲೇಜಿನಲ್ಲಿ MD ವ್ಯಾಸಂಗ ಮಾಡುತ್ತಲೇ ‘ನಮ್ಮ ಕ್ಲಿನಿಕ್’ನಲ್ಲಿ ವೈದ್ಯಾಧಿಕಾರಿಯಾಗಿ ಕರ್ತವ್ಯ ನಿರ್ವಹಿಸದೆ ₹75 ಸಾವಿರ ಸರ್ಕಾರಿ ವೇತನ …

Leave a Reply

Your email address will not be published. Required fields are marked *