ನಗದು ಹಣವನ್ನು ಡಿಜಿಟಲ್ ಕರೆನ್ಸಿಯಾಗಿ ಬದಲಾವಣೆ ಮಾಡಿಕೊಡುವುದಾಗಿ ಉದ್ಯಮಿಯನ್ನು ನಂಬಿಸಿ 2 ಕೋಟಿ ರೂ. ಹಣ ಪಡೆದು ಬಳಿಕ ಅಪರಿಚಿತ ವ್ಯಕ್ತಿಗಳಿಂದ ದರೋಡೆಯಾಗಿದೆ ಎಂದು ಸುಳ್ಳು ದೂರು ನೀಡಿದ್ದ ವ್ಯಕ್ತಿ ಸೇರಿ ಒಟ್ಟು 15 ಮಂದಿ ಆರೋಪಿಗಳನ್ನು ಇಲ್ಲಿನ ವಿದ್ಯಾರಣಪುರ ಠಾಣೆ ಪೊಲೀಸರು ಬಂಧಿಸಿರುವುದಾಗಿ ತಿಳಿಸಿದ್ದಾರೆ.ಸುಳ್ಳು ದೂರು ನೀಡಿದ್ದ ಶ್ರೀಹರ್ಷ ಹಾಗೂ ಆತನ ಸಹಚರರಾದ ರಕ್ಷಿತ್, ಚಂದ್ರಶೇಖರ, ರಾಕೇಶ್, ಬೆಂಜಮಿನ್ ಸಹಿತ ಒಟ್ಟು 15 ಮಂದಿ ಆರೋಪಿಗಳನ್ನು ಬಂಧಿಸಿ 1.11 ಕೋಟಿ ರೂ. ನಗದು, ಕೃತ್ಯಕ್ಕೆ ಬಳಸಿದ್ದ 4 ಕಾರುಗಳು, 4 ದ್ವಿಚಕ್ರವಾಹನಗಳು, 2 ಆಟೋಗಳು, 8 ಮೊಬೈಲ್ ಹಾಗೂ ಒಂದು ಲಾಂಗ್ ಅನ್ನು ವಶಕ್ಕೆ ಪಡೆದುಕೊಳ್ಳಲಾಗಿದೆ. ಕೃತ್ಯದಲ್ಲಿ ಭಾಗಿಯಾದ ಇನ್ನೂ ನಾಲ್ವರು ತಲೆಮರೆಸಿಕೊಂಡಿದ್ದು, ಬಂಧನಕ್ಕೆ ಶೋಧ ನಡೆಸಲಾಗುತ್ತಿದೆ ಎಂದು ಪೊಲೀಸರು ವಿವರಿಸಿದ್ದಾರೆ.
bigtvnews | Hubli Dharwad News | Kannada News | Karnataka News Hubli News | News In Hubli | Local news

