Breaking News

ಫಾರ್ವರ್ಡ್ ಮೆಸೇಜ್​​ ತಂದ ಆಪತ್ತು: ಮನೆಗೆ ನುಗ್ಗಿ ಗೆಳಯನ ಹತ್ಯೆ!!

ಉಡುಪಿಯ ನಡುರಾತ್ರಿ ರಕ್ತ ಹರಿದಿದೆ. ನೇಜಾರು ಒಂದೇ ಕುಟುಂಬದ ನಾಲ್ವರ ಮರ್ಡರ್‌ ಬಳಿಕ ಕರಾವಳಿ ಜಿಲ್ಲೆ ಉಡುಪಿ ಶಾಂತವಾಗಿತ್ತು. ಆದರೆ ಅದೊಂದು ವಿಚಾರದಲ್ಲಿ ನಡೆದ ವಾಗ್ವಾದ ಓರ್ವ ವ್ಯಕ್ತಿಯನ್ನು ರಕ್ತ ಮಡುವಿನಲ್ಲಿ ಪ್ರಾಣ ಬಿಡುವಂತೆ ಮಾಡಿತ್ತು.ವಿನಯ್ ಮನೆಯಲ್ಲಿ ಇಲ್ಲ ಎಂದದೇ ತಡ, ತಲವಾರು ಹಿಡಿದು ಬಂದಿದ್ದ ಮೂವರು ಸೀದಾ ವಿನಯ್‌ ಕೋಣೆಗೆ ತೆರಳಿ ವಿನಯ್‌ ಮೇಲೆ ತಲವಾರ್‌ ಬೀಸಿದ್ದಾರೆ. ಪತ್ನಿ ಮತ್ತು ತಾಯಿ ಎಷ್ಟೇ ಕಾಡಿ, ಬೇಡಿಕೊಂಡರು ದುರುಳರ ಮನ ಮಾತ್ರ ಮಿಡಿಯಲೇ ಇಲ್ಲ. ಕೈಯಲ್ಲಿದ್ದ ತಲವಾರುನಿಂದ ಗೆಳಯನನ್ನು ಯದ್ವ ತದ್ವ ಕೊಚ್ಚಿ ಕೊಲೆ ಮಾಡಿ ಪರಾರಿಯಾಗಿದ್ದಾರೆ.ಪುತ್ತೂರಿನಲ್ಲಿ ಕ್ಷುಲ್ಲಕ ವಿಚಾರಕ್ಕೆ ಗೆಳೆಯನನ್ನೆ ಕೊಲೆ ಮಾಡಿದ ಆರೋಪಿಗಳು ಬಳಿಕ ನೇರವಾಗಿ ಬ್ರಹ್ಮಾವರ ಪೊಲೀಸ ಠಾಣೆಗೆ ಹೋಗಿದ್ದಾರೆ. ಪುತ್ತೂರಿನಲ್ಲಿ ವಿನಯ್ ದೇವಾಡಿಗನನ್ನು ಕೊಲೆ ಮಾಡಿದ್ದ ಆರೋಪಿಗಳೆಂದು ಬ್ರಹ್ಮಾವರ ಪೊಲೀಸರ ಮುಂದೆ ಸರೆಂಡರ್‌ ಆಗಿದ್ದಾರೆ. ಬ್ರಹ್ಮಾವರ ಸಮೀಪದ ಕೊಕ್ಕರ್ಣೆ ಗಾಂಧಿ ನಗರ ನಿವಾಸಿ ಅಜಿತ್ (28), ಅಕ್ಷೇಂದ್ರ (34) ಮತ್ತು ಬೆನಗಲ್ ನಿವಾಸಿ ಪ್ರದೀಪ್ ಆಚಾರ್ಯ ಬಂಧಿತರು.

Share News

About BigTv News

Check Also

ಕೊಲ್ಲೂರಿನಲ್ಲಿ 80 ಸಾವಿರ ರೂ. ಕಳವು: 24 ಗಂಟೆಯೊಳಗೆ ಮೂವರು ಕಳ್ಳಿಯರ ಬಂಧನ

ಉಡುಪಿ: ಕೊಲ್ಲೂರು ಶ್ರೀ ಮೂಕಾಂಬಿಕಾ ದೇವಸ್ಥಾನದಲ್ಲಿ ಭಕ್ತೆಯ ವ್ಯಾನಿಟಿ ಬ್ಯಾಗ್‌ನಿಂದ ₹80 ಸಾವಿರ ನಗದು ಕಳವು ಮಾಡಿದ ಪ್ರಕರಣವನ್ನು ಕೊಲ್ಲೂರು …

Leave a Reply

Your email address will not be published. Required fields are marked *