ಗಣಪತಿ ವಿಸರ್ಜನೆ ವೇಳೆ ದುರಂತ ಸಂಭವಿಸಿದ್ದು, ನೀರಿನಲ್ಲಿ ಮುಳುಗಿ ಯುವಕ ಸಾವನ್ನಪ್ಪೀರುವ ಘಟನೆ ಮಂಡ್ಯ ತಾಲ್ಲೂಕಿನ ಬೇಲೂರು ಗ್ರಾಮದ ಗ್ರಾಮದ ಕೆರೆಯಲ್ಲಿ ಜರುಗಿದೆ.ಯರಹಳ್ಳಿ ಗ್ರಾಮದ ಪ್ರದೀಪ್( 28) ಮೃತ ಯುವಕ. ರಾತ್ರಿ ಬೇಲೂರು ಕೆರೆಯಲ್ಲಿ ಯುವಕರು ಗಣೇಶ ವಿಸರ್ಜನೆ ಮಾಡ್ತಿದ್ದರು.ಯುವಕರ ಜೊತೆ ನೀರಿಗಿಳಿದಿದ್ದ ಪ್ರದೀಪ್ ನೀರಿನಲ್ಲಿ ಮುಳುಗಿ ಸಾವ ನ್ನಪ್ಪಿದ್ದಾರೆ. ಪ್ರದೀಪ್ ಮದ್ಯಪಾನ ಮಾಡಿ ನೀರಿಗಿಳಿದಿದ್ದ ಶಂಕೆ ವ್ಯಕ್ತವಾಗಿದೆ.
ಸ್ಥಳಕ್ಕೆ ಅಗ್ನಿಶಾಮಕ ಸಿಬ್ಬಂದಿಗಳು ಭೇಟಿ ನೀಡಿ, ಪ್ರದೀಪ್ ಮೃತ ದೇಹ ಹೊರ ತೆಗೆದಿದ್ದಾರೆ. ಮಂಡ್ಯ ಗ್ರಾಮಾಂತರ ಪೊಲೀಸ್ ಠಾಣೆ ವ್ಯಾಪ್ತಿಯಲ್ಲಿ ಪ್ರಕರಣ ದಾಖಲಾಗಿದೆ.
bigtvnews | Hubli Dharwad News | Kannada News | Karnataka News Hubli News | News In Hubli | Local news

