ಬೀಮ್ಸ್ ಆಸ್ಪತ್ರೆಯಲ್ಲಿ ನಕಲಿ ನರ್ಸ್ ಹುಚ್ಚಾಟ ಮೆರೆದಿದ್ದು, ನಾನು ನರ್ಸಿಂಗ್ ವಿದ್ಯಾರ್ಥಿನಿ ಎಂದು ಆಸ್ಪತ್ರೆಯ ರೋಗಿಗಳಿಗೆ ಟ್ರೀಟ್ಮೆಂಟ್ ಕೊಡ್ತಿರುವ ಆರೋಪ ಕೇಳಿಬಂದಿದೆ. ಎರಡ್ಮೂರು ತಿಂಗಳಿಂದ ನರ್ಸಿಂಗ್ ವಿದ್ಯಾರ್ಥಿನಿ ಎಂದು ಹೇಳಿ ರೋಗಿಗಳಿಗೆ ಕಾರವಾರ ಮೂಲದ ಸನಾ ಶೇಖ್ ಎಂಬಾಕೆ ಚಿಕಿತ್ಸೆ ನೀಡುವ ಮೂಲಕ ಹುಚ್ಚಾಟ ಮೆರೆದಿದ್ದಾರೆ.ಇದೀಗ ರೋಗಿಗಳಿಗೆ ಚಿಕಿತ್ಸೆ ನೀಡುವಾಗ ಸೆಕ್ಯೂರಿಟಿ ಗಾರ್ಡ್ ಕೈಗೆ ಆಗಿ ಸಿಕ್ಕಿಬಿದ್ದ ನಕಲಿ ನರ್ಸ್ ಅನ್ನು ತಕ್ಷಣವೇ ಬೆಳಗಾವಿ ಬೀಮ್ಸ್ ಸರ್ಜನ್, ಆರ್ ಎಂಓ ಗಮನಕ್ಕೆ ಬೀಮ್ಸ್ ಸೆಕ್ಯೂರಿಟಿ ತಂದಿದ್ದಾರೆ. ವಿಚಾರಣೆ ವೇಳೆ ಬೇರೊಂದು ಖಾಸಗಿ ಆಸ್ಪತ್ರೆಯಲ್ಲಿ ಪ್ರಾಕ್ಟೀಸ್ ಮಾಡ್ತಿರೋದು ದೃಢವಾಗಿದ್ದು, ಆಸ್ಪತ್ರೆಯಲ್ಲಿರೋ ವಿಭಾಗವೊಂದರ ಹೆಡ್ ಕುಮ್ಮಕ್ಕಿಂದ ಪ್ರ್ಯಾಕ್ಟೀಸ್ ಮಾಡ್ತಿರೋ ಬಗ್ಗೆ ಮಾಹಿತಿ ದೊರೆತಿದೆ. ಸದ್ಯ ಈ ಯಡವಟ್ಟಿನ ಬಗ್ಗೆ ಮಾಧ್ಯಮಗಳಿಗೆ ಪ್ರತಿಕ್ರಿಯೆ ನೀಡಲು ಬೀಮ್ಸ್ ಆಡಳಿತ ಮಂಡಳಿ ನಕಾರ ಮಾಡಿದೆ.
bigtvnews | Hubli Dharwad News | Kannada News | Karnataka News Hubli News | News In Hubli | Local news

