Breaking News

ಸೇಡಂನಲ್ಲಿ ಛತ್ತೀಸಗಡದ ಇಬ್ಬರು ಕಾರ್ಮಿಕರ ಹತ್ಯೆ.

ಕ್ಷುಲ್ಲಕ ಕಾರಣಕ್ಕೆ ಆರಂಭಗೊಂಡ ಜಗಳ ಇಬ್ಬರ ಕೊಲೆಯಲ್ಲಿ ಅಂತ್ಯಗೊಂಡ ಘಟನೆ ತಾಲ್ಲೂಕಿನ ಕೋಡ್ಲಾ-ಬೆನಕನಹಳ್ಳಿ ಗ್ರಾಮದ ಶ್ರೀ ಸಿಮೆಂಟ್ ಕಂಪನಿಯ ಕಾಲೊನಿಯಲ್ಲಿ ಸೋಮವಾರ ಬೆಳಿಗ್ಗೆ ನಡೆದಿದೆ.ಕಂಪನಿಯಲ್ಲಿ ಗುತ್ತಿಗೆ ಆಧಾರದ ಮೇಲೆ ಕೆಲಸ ಮಾಡುತ್ತಿದ್ದ ಕಾರ್ಮಿಕರ ಮಧ್ಯೆ ಅಡುಗೆ ವಿಷಯಕ್ಕೆ ಸಂಬಂಧಿಸಿದಂತೆ ನಿತ್ಯ ಜಗಳವಾಗುತ್ತಿತ್ತು.ಭಾನುವಾರ ರಾತ್ರಿ ಜಗಳ ತಾರಕ್ಕೇರಿದ್ದು, ಇಬ್ಬರು ಕಾರ್ಮಿಕರು ಸ್ಥಳದಲ್ಲಿಯೇ ಮೃತಪಟ್ಟಿದ್ದಾರೆ.

ಛತ್ತೀಸಗಡ ರಾಜ್ಯದ ಗೋಪಾಲ ಪಟೇಲ್ (31), ಗೋಪಾಲ‌ ವರ್ಮಾ (29) ಮೃತ ಕಾರ್ಮಿಕರು. ವಿಜಯ ನಶಾದ ಎಂಬ ಕಾರ್ಮಿಕ ಕೊಲೆ ಮಾಡಿದ್ದಾನೆ ಎನ್ನಲಾಗಿದೆ.

Share News

About BigTv News

Check Also

ರಾಜಕೀಯ ಮರೆತು ಮಾನವೀಯತೆ ಮೆರೆದ ಕ್ಷಣ: ಚೆನ್ನಮ್ಮ ಅಂತಿಮ ದರ್ಶನದ ವೇಳೆ ದೇವೇಗೌಡರ ಕೈಹಿಡಿದು ಸಿದ್ದರಾಮಯ್ಯ ಸಾಂತ್ವನ

ರಾಜಕೀಯದಲ್ಲಿ ಭಿನ್ನಾಭಿಪ್ರಾಯಗಳಿದ್ದರೂ ಮಾನವೀಯತೆ ಎಲ್ಲಕ್ಕಿಂತ ದೊಡ್ಡದು ಎಂಬುದಕ್ಕೆ ಬೆಂಗಳೂರಿನಲ್ಲಿ ನಡೆದ ಘಟನೆ ಸಾಕ್ಷಿಯಾಯಿತು. ಮಾಜಿ ಪ್ರಧಾನಿ ಎಚ್.ಡಿ. ದೇವೇಗೌಡರ ಪತ್ನಿ …

Leave a Reply

Your email address will not be published. Required fields are marked *