ರಾಯಬಾಗ ತಾಲೂಕಿನ ಕುಡಚಿ ಪಟ್ಟಣದಿಂದ ಹೈದರಾಬಾದ್ ಗೆ ಲಾರಿ ತುಂಬಿಕೊಂಡು ಗೋಮಾಂಸ ಸಾಗಿಸುತ್ತಿರುವ ಮಾಹಿತಿ ಪಡೆದ ಸಾರ್ವಜನಿಕರು ಐನಾಪುರ ಗ್ರಾಮದ ಉಗಾರ ರಸ್ತೆಯ ಶ್ರೀ ಸಿದ್ದೇಶ್ವರ ಗುಡಿ ಹತ್ತಿರ ರಾತ್ರಿ 10 ಗಂಟೆ ಸುಮಾರಿಗೆ ಲಾರಿ ತಡೆ ಹಿಡಿದಿದ್ದಾರೆ.ಚಾಲಕನನ್ನು ವಿಚಾರಿಸಿ ನಂತರ ಲಾರಿಯನ್ನು ಪರಿಶೀಲಿಸಿದಾಗ ಅಪಾರ ಪ್ರಮಾಣದಲ್ಲಿ ಗೋಮಾಸ ಇರುವುದು ಕಂಡುಬಂದಿದೆ. ಆಗ ರೊಚ್ಚಿಗೆದ್ದ ಸಾರ್ವಜನಿಕರು ಲಾರಿಗೆ ಬೆಂಕಿ ಹಚ್ಚಿದ್ದಾರೆ.ಪೊಲೀಸರು ಸ್ಥಳಕ್ಕೆ ಬರುವಷ್ಟರಲ್ಲಿ ಲಾರಿ ಬೆಂಕಿಗಾಹುತಿಯಾಗಿತ್ತು. ಲಾರಿಯಲ್ಲಿ ಸುಮಾರು ಐದು ಟನ್ ಗೂ ಹೆಚ್ಚು ಗೋಮಾಂಸ ಇತ್ತು ಎನ್ನಲಾಗುತ್ತಿದೆ. ಕಾಗವಾಡ ಪೊಲೀಸ್ ಪಿಎಸ್ ಐ ರಾಘವೇಂದ್ರ ಖೋತ ಹಾಗೂ ಸಿಬ್ಬಂದಿ ಭೇಟಿ ನೀಡಿ ಪರಿಶೀಲನೆ ನಡೆಸಿದರು.
bigtvnews | Hubli Dharwad News | Kannada News | Karnataka News Hubli News | News In Hubli | Local news

