ಗರ್ಭಿಣಿ ಪತ್ನಿ ಮೇಲೆ ಕಾರು ಹತ್ತಿಸಿ ಕೊಲೆ ಮಾಡಿದ ಆರೋಪಿ ಪತಿಯನ್ನು ಪೊಲೀಸರು ಬಂಧಿಸಿದ್ದಾರೆ.ಬೆಳಗಾವಿ ಜಿಲ್ಲೆಯ ಕಾಗವಾಡ ತಾಲೂಕಿನ ಹೂಗಾರ್ ಗ್ರಾಮದಲ್ಲಿ ಈ ಘಟನೆ ನಡೆದಿದೆ.ಪತ್ನಿ ಗರ್ಭಿಣಿಯಾಗಿದ್ದರೂ ಈತನಿಗೆ ಬುದ್ದಿ ಬಂದಿರಲಿಲ್ಲ. ಪ್ರೀತಿಸಿ ಮದ್ವೆ ಆದ ಪ್ರದೀಪ್ ಆಂಟಿ ಮೋಹಕ್ಕೆ ಬಿದ್ದು ರಾಕ್ಷಸೀಯ ಕೃತ್ಯ ಎಸಗಿದ್ದಾನೆ. ಪತಿಯನ್ನು ಕಾರಿನಲ್ಲಿ ಟೆಸ್ಟ್ ಡ್ರೈವ್ ಗೆ ಅಂತ ಕರೆದುಕೊಂಡು ಹೋಗಿ ಕಾರು ಹತ್ತಿಸಿ ಕೊಲೆ ಮಾಡಿದ್ದಾನೆ. ಪಕ್ಕದ ಮನೆಯ ಆಂಟಿ ಮೋಹಕ್ಕೆ ಬಿದ್ದು, ಆಕೆಯ ಜೊತೆ ಅನೈತಿಕ ಸಂಬಂಧ ಬೆಳೆಸಿ ತುಂಬು ಗರ್ಭಿಣಿ ಹೆಂಡತಿ ಮೇಲೆ ಕಾರು ಹತ್ತಿಸಿ ನಂತರ ಅಪಘಾತವಾಗಿದೆ ಎಂದು ಕತೆ ಕಟ್ಟಿದ್ದನು. ರಾಡ್ ನಿಂದ ಪತ್ನಿಯನ್ನು ಹೊಡೆದು ಕೊಂದು ಕಾರು ಹತ್ತಿಸಿದ್ದಾನೆ. ನಂತರ ಅಪಘಾತವಾಗಿದೆ ಎಂದು ಬಿಂಬಿಸಿ ಆಸ್ಪತ್ರೆಗೆ ಕರೆದುಕೊಂಡು ಹೋಗಿದ್ದಾನೆ.
bigtvnews | Hubli Dharwad News | Kannada News | Karnataka News Hubli News | News In Hubli | Local news

