Breaking News
Featured Video Play Icon

ಇಸ್ಪೀಟ್ ನಲ್ಲಿ ದಾವುದ್ ಅಂದರ್: ಹುಬ್ಬಳ್ಳಿಯಲ್ಲಿ ನಡೆಯುತ್ತಿದೆ ಅವ್ಯಾಹತವಾಗಿ ಅಂದರ್ ಬಾಹರ್..!

ಹುಬ್ಬಳ್ಳಿ: ಹುಬ್ಬಳ್ಳಿ ಧಾರವಾಡ ಅವಳಿನಗರದಲ್ಲಿ ಇಸ್ಪೀಟು ಆಟದ ಹಾವಳಿ ಜೋರಾಗಿದೆ. ಮಂಟೂರ್ ರಸ್ತೆಯಲ್ಲಿ ರೌಡಿಶೀಟರ್ ಗಳು ನಡೆಸುತ್ತಿದ್ದ ಇಸ್ಪೀಟ್ ಅಡ್ಡೆ ಮೇಲೆ ಸಿಸಿಬಿ ಹಾಗೂ ಶಹರ ಠಾಣೆಯ ಪೊಲೀಸರು ದಾಳಿಯನ್ನು ಮಾಡಿದಾಗ ಪೊಲೀಸರ ಮೇಲೆಯೇ ಹಲ್ಲೆ ಮಾಡಲು ಯತ್ನಿಸಿದ ಆರೋಪದಡಿಯಲ್ಲಿ 6 ಜನ ರೌಡಿ ಶೀಟರ್ ಗಳು ಸೇರಿದಂತೆ 19 ಜನ ಆರೋಪಿಗಳನ್ನು ಬಂಧನ ಮಾಡಿದ್ದಾರೆ.ಮಂಟೂರ್ ರಸ್ತೆಯ ಮನೆಯೊಂದರಲ್ಲಿ ದೀಪಾವಳಿ ಹಬ್ಬದ ಪ್ರಯುಕ್ತವಾಗಿ ಹಲವು ರೌಡಿ ಶೀಟರ್’ಗಳು ಸೇರಿ ಇಸ್ಪೀಟ್ ಆಟವನ್ನು ಆಡಿಸುತ್ತಿದ್ದ ಖಚಿತ ಮಾಹಿತಿಯ ಮೇರೆಗೆ ಸಿಸಿಬಿ ಪೊಲೀಸರು ದಾಳಿಯನ್ನು ಮಾಡಿದಾಗ ಹಲವು ರೌಡಿ ಶೀಟರ್ ಗಳು ಪೊಲೀಸರನ್ನು ನೂಕಿ ಪೊಲೀಸರ ಹ್ಯಾಂಡಿ ಕ್ಯಾಮ್ ಒಡೆದು ಹಾಕಿ ಪರಾರಿಯಾಗಿದ್ದು ಈ ವೇಳೆ ಸಿಸಿಬಿ ಪೊಲೀಸ್ ಸಿಬ್ಬಂದಿ ಓರ್ವ ಗಾಯಗೊಂಡು ಕಿಮ್ಸ್ ಆಸ್ಪತ್ರೆಗೆ ದಾಖಲಾಗಿದ್ದಾರೆ.ಕಿಮ್ಸ್ ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆಯುತ್ತಿರುವ ಸಿಬ್ಬಂದಿಯ ಆರೋಗ್ಯವನ್ನು ಕಮಿಷನರ್ ಎನ್. ಶಶಿಕುಮಾರ್ ವಿಚಾರಣೆ ಮಾಡಿದ್ದಾರೆ. ಬಂಧಿತ ಆರೋಪಿಗಳಿಂದ 61,000 ಸಾವಿರ ನಗದು, 11 ಮೊಬೈಲ್ ಗಳನ್ನು ವಶಕ್ಕೇ ಪಡೆಯಲಾಗಿದ್ದು ಆರೋಪಿಗಳ ಮೇಲೆ

ಶಹರ ಪೊಲೀಸ್ ಠಾಣೆಯಲ್ಲಿ ಕರ್ತವ್ಯಕ್ಕೆ ಅಡ್ಡಿ ಪಡೆಸಿದ ಹಾಗೂ ಜೂಜಾಟದ ಪ್ರಕರಣವನ್ನು ದಾಖಲು ಮಾಡಲಾಗಿದೆ ಎಂದು ಕಮೀಷನರ್ ಶಶಿಕುಮಾರ್ ಹೇಳಿದರು.ದೀಪಾವಳಿ ಇದೆ ಎಂದು ಜೂಜಾಟ್ ಆಡಿದ್ರೆ ನಡೆಯುತ್ತೆ ಎಂದು ಜೂಜಾಟದಲ್ಲಿ ತೊಡಗಿದ್ರೆ ಮುಲಾಜಿಲ್ಲದೆ ಕಟ್ಟು ನಿಟ್ಟಿನ ಕ್ರಮವನ್ನು ಕೈಗೊಳ್ಳುತ್ತೇವೆ ಎಂದು ಜೂಜು ಕೋರರಿಗೆ ಕಮಿಷನರ್ ಎಚ್ಚರಿಕೆ ನೀಡಿದ್ದಾರೆ. ಒಟ್ಟು 9 ಜನ ರೌಡಿ ಶೀಟರ್ ನ್ನು ವಶಕ್ಕೆ ಪಡೆದುಕೊಂಡಿದ್ದೇವೆ. ಪ್ರಮುಖ ವ್ಯಕ್ತಿ ದಾವುದ್ ಅರಳಿಕಟ್ಟಿ ಓಣಿ ಹುಬ್ಬಳ್ಳಿ, 14 ರಿಂದ 15 ಪ್ರಕರಣ ದಾಖಲಾಗಿದೆ ಎಂದು ಹುಬ್ಬಳ್ಳಿ ಧಾರವಾಡ ಕಮೀಷನರ್ ಎನ್ ಶಶಿಕುಮಾರ್ ಹೇಳಿದರು.ನಗರದಲ್ಲಿ ಸುದ್ದಿಗಾರರೊಂದಿಗೆ ಮಾತನಾಡಿದ ಅವರು,ಇವನ್ನು ತನ್ನದೇ ಆದ ಪ್ರತ್ಯೇಕ ಗುಂಪು ಕಟ್ಟಿಕೊಂಡು ಏರಿಯಾದಲ್ಲಿ‌ ಅಕ್ರಮ ಚಟುವಟಿಕೆ ಹಾಗೂ ಹೊಡೆದಾಟದಲ್ಲಿ ಭಾಗಿಯಾಗಿದ್ದಾನೆ‌, ಬೆದರಿಕೆ, ಹಣ ವಸೂಲಿ ಈ ಕುರಿತು ಹಿಂದೇನೆ ಮಾಹಿತಿ ಇತ್ತು. ಟೌನ್ ರಿಜಿಸ್ಟರ್ ರಿವುದಿಲ್ಲಿ ದಾವೂದ್ ಕೂಡಾ ಒಬ್ಬ. ಮೂರು ತಿಂಗಳಿಂದ ಇತನ ಮೇಲೆ ನಿಗಾ ಇಡಲಾಗಿತ್ತು. ಇನ್ನೊಬ್ಬ ರೌಡಿ ಶಿಟ್ಟರ್ ತಪ್ಪಿಸಿಕೊಂಡಿದ್ದಾರೆ. ಆದಷ್ಟು ಬೇಗ ಆತನನ್ನು ಬಂಧನ ಮಾಡಲಾಗುತ್ತದೆ ಎಂದರು.

Share News

About Shaikh BigTv

Check Also

ಇಬ್ಬರ ಜಗಳ ಬಿಡಿಸಲು ಹೋದ ಯುವಕನ ಕತ್ತು ಸೀಳಿ ಭೀಕರ ಕೊಲೆ!

ಮಂಡ್ಯ: ಹಣಕಾಸಿನ ವಿಚಾರವಾಗಿ ನಡೆಯುತ್ತಿದ್ದ ಗಲಾಟೆಯನ್ನು ಬಿಡಿಸಲು ಹೋದ 25 ವರ್ಷದ ನಂದನ್ ಎಂಬ ಯುವಕನನ್ನು ಡ್ರ್ಯಾಗರ್‌ನಿಂದ ಕತ್ತು ಸೀಳಿ …

Leave a Reply

Your email address will not be published. Required fields are marked *