Breaking News

ಅಸ್ಸಾಂ: ಎಸಿಎಸ್ ಅಧಿಕಾರಿ ನೂಪುರ್ ಮನೆಯಲ್ಲಿ 2 ಕೋಟಿ ರೂ. ನಗದು, ಚಿನ್ನಾಭರಣ ಪತ್ತೆ, ಭೂ ಹಗರಣದಲ್ಲಿ ಅರೆಸ್ಟ್​

ಭೂಹಗರಣದಲ್ಲಿ ಅಸ್ಸಾಂನ ನಾಗರಿಕ ಸೇವೆ( ಎಸಿಎಸ್)ಗಳ ಮಹಿಳಾ ಅಧಿಕಾರಿ ನೂಪುರ್ ಬೋರಾ ಅವರನ್ನು ಬಂಧಿಸಲಾಗಿದೆ. ಅವರ ಮನೆಯಲ್ಲಿ 2 ಕೋಟಿ ರೂ. ನಗದು, ಭಾರಿ ಚಿನ್ನಾಭರಣಗಳು ಪತ್ತೆಯಾಗಿವೆ. ಅವರನ್ನು ಬಾರ್ಪೇಟಾ ಜಿಲ್ಲೆಯಲ್ಲಿ ನಿಯೋಜಿಸಲಾಗಿತ್ತು, ಅಲ್ಲಿ ಅವರು ಹಿಂದೂ ಕುಟುಂಬಗಳ ಭೂಮಿಯನ್ನು ಮುಸ್ಲಿಮರಿಗೆ ಅಕ್ರಮವಾಗಿ ವರ್ಗಾಯಿಸಿದ್ದರು.ಅವರ ಮನೆಯಿಂದ 1 ಕೋಟಿ ರೂ.ಗೂ ಹೆಚ್ಚು ಮೌಲ್ಯದ ಚಿನ್ನ ಮತ್ತು ನೋಟುಗಳ ಬಂಡಲ್‌ಗಳನ್ನು ವಶಪಡಿಸಿಕೊಳ್ಳಲಾಗಿದೆ. ಈ ವಿಷಯದ ತನಿಖೆಗೆ ಕ್ರಮ ಕೈಗೊಳ್ಳಲು ಮುಖ್ಯಮಂತ್ರಿ ಹಿಮಂತ ಬಿಸ್ವಾ ಶರ್ಮಾ ವಿಶೇಷ ತಂಡಕ್ಕೆ ಆದೇಶಿಸಿದ್ದಾರೆ.

Share News

About BigTv News

Check Also

ವೆಂಕಟಗಿರಿಕೋಟೆ ಗಲಾಟೆ 7 ಮಂದಿ ವಿರುದ್ಧ ಪ್ರಕರಣ

ಚಿಂತಾಮಣಿ: ನಗರದ ವೆಂಕಟಗಿರಿಕೋಟೆ ಬಡಾವಣೆಯಲ್ಲಿ ಏ.13ರಂದು ಸಂಜೆ ಕೈಕೈ ಮಿಲಾಯಿಸಿದವರನ್ನು ಗಸ್ತಿನಲ್ಲಿದ್ದ ಪೊಲೀಸರು ತಡೆದು ಬುದ್ಧಿ ಹೇಳಿದರೂ ಕೇಳದೆ ಮುಂದುವರಿದು …

Leave a Reply

Your email address will not be published. Required fields are marked *