ಕಾನಾಹೊಸಹಳ್ಳಿ ಸಮೀಪದ ಬಿಷ್ಣಹಳ್ಳಿ ಕ್ರಾಸ್ ಬಳಿಯ ರಾಹೆ 50 ರಲ್ಲಿ ಸ್ಲೀಪರ್ ಬಸ್ ಹಾಗೂ ಲಾರಿ ಮಧ್ಯೆ ಮಂಗಳವಾರ (ಸೆ.16) ಮುಂಜಾನೆ ಅಪಘಾತ ಸಂಭವಿಸಿ ಇಬ್ಬರು ಸ್ಥಳದಲ್ಲೇ ಮೃತಪಟ್ಟಿದ್ದಾರೆ .ಮೃತರನ್ನು ಮನೋಜ್ ( 28) ಸುರೇಶ್ ( 45) ಎಂದು ಗುರುತಿಸಲಾಗಿದೆ .ಮಧ್ಯರಾತ್ರಿ ಅಪಘಾತವಾದ ಸುದ್ದಿ ತಿಳಿದ ಕೂಡಲೆ ಪಿಎಸೈ ಹಾಗೂ ಸಿದ್ರಾಮ್ ಬಿದ್ರಾಣಿ ಸ್ಥಳಕ್ಕೆ ಹೋಗಿ ಗಾಯಾಳುಗಳನ್ನು ಆಂಬುಲೆನ್ಸ್ ಗೆ ಹಾಕಿ ಆಸ್ಪತ್ರೆಗೆ ಕಳುಹಿಸಿದ್ದಾರೆ ಅಲ್ಲದೆ ಅವರ ಕಾರ್ಯಕ್ಕೆ ಗಾಯಾಳುಗಳೇ ಮೆಚ್ವುಗೆ ವ್ಯಕ್ತಪಡಿಸಿದ್ದಾರೆ .ಸ್ಥಳಕ್ಕೆ ವಿಜಯನಗರ ಎಸ್ ಪಿ ಡಾ ಜಾನ್ಹವಿ ಕೂಡ್ಲಿಗಿ ಡಿವೈಎಸ್ಪಿ ಮಲ್ಲೇಶ್ ದೊಡ್ಮನಿ , ಕೊಟ್ಟೂರು ಸಿಪಿಐ ದುರುಗಪ್ಪ , ಕಾನಾಹೊಸಳ್ಳಿ ಪಿಎಸ್‌ಐ ಸಿದ್ದರಾಮ ಬಿದ್ರಾಣಿ ಭೇಟಿ ನೀಡಿ , ಪರಿಶೀಲನೆ ನಡೆಸಿದ್ದಾರೆ.ಕಾನಾಹೊಸಳ್ಳಿ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ .
bigtvnews | Hubli Dharwad News | Kannada News | Karnataka News Hubli News | News In Hubli | Local news

