ತುಮಕೂರು ಮಿಲ್ಕ್ ಯೂನಿಯನ್‌ನಲ್ಲಿ ಲೆಕ್ಕಪತ್ರ ವಿಭಾಗದ ಆಡಳಿತ ಅಧೀಕ್ಷಕನಾಗಿರುವ ವಿನಯ್ ಎಂಬ 35 ವರ್ಷದ ದಲಿತ ಅಧಿಕಾರಿಗೆ ಮೇಲಾಧಿಕಾರಿಗಳು ಕಿರುಕುಳ ನೀಡಿರುವ ಆರೋಪ ಕೇಳಿಬಂಧಿದೆ. ದಲಿತನೆಂಬ ಕಾರಣಕ್ಕೆ ಅಧೀಕ್ಷರ ಹುದ್ದೆಯಲ್ಲಿರುವ ವಿನಯ್ ಅವರ ಚೇರು, ಟೇಬಲ್ ಕಿತ್ತುಕೊಂಡು, ಕಿರುಕುಳ ನೀಡಲಾಗಿದೆ. ಈ ಹಿನ್ನೆಲೆ ವಿನಯ್ ಕಚೇರಿಯಲ್ಲಿ ನೆಲದ ಮೇಲೆಯೇ ಕುಳಿತು ಕೆಲಸ ಮಾಡಿದ್ದಾರೆ.
ವಿನಯ್ ಅವರಿಗೆ ತುಮುಲ್‍ನ ಮೇಲ್ವರ್ಗಕ್ಕೆ ಸೇರಿದ ಅಧಿಕಾರಿಗಳು ಕಿರುಕುಳ ನೀಡಿ, ತಾವೇ ಸ್ವತಃ ಹುದ್ದೆ ತೊರೆದು ಹೋಗುವಂತೆ ಮಾನಸಿಕ ಹಿಂಸೆ ನೀಡುತ್ತಿದ್ದಾರೆ. ಈ ಬಗ್ಗೆ ಪೊಲೀಸರಿಗೆ ದೂರು ನೀಡಿದ್ದರೂ ಯಾವುದೇ ಪ್ರಯೋಜನವಾಗಿಲ್ಲ ಎಂದು ಸಂತ್ರಸ್ತ ಅಧಿಕಾರಿ ವಿನಯ್ ತಿಳಿಸಿದ್ದಾರೆ.
bigtvnews | Hubli Dharwad News | Kannada News | Karnataka News Hubli News | News In Hubli | Local news

