ಹುಬ್ಬಳ್ಳಿ: ಹಣಕಾಸಿನ ವ್ಯವಹಾರಕ್ಕೆ ಸಂಬಂಧಿಸಿದಂತೆ ಹುಬ್ಬಳ್ಳಿಯ
ಕಾಂಟ್ರಾಕ್ಟರ್ ಮೋಹನ ಚವ್ಹಾಣ್ ಎಂಬುವರನ್ನು ಬೆಳಗಾವಿಯ ಗೋಕಾಕ್ ಗ್ಯಾಂಗ್‌ವೊಂದು ಕಚೇರಿಗೆ ಬಂದು ಎಳೆದೋಯ್ದು ಕಾರಿನಲ್ಲಿ ಕಿಡ್ನಾಪ್ ಮಾಡಿದ್ದರು. ಈ ಕುರಿತು ಗೋಕುಲ್ ರೋಡ್ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿತ್ತು. ಹಿಂದೆ ಬೆನ್ನತ್ತಿದ್ದ ಪೊಲೀಸರು ಕಿಡ್ನಾಪ್ ಮಾಡಿದ 12 ಜನರನ್ನು ಅರೆಸ್ಟ್ ಮಾಡಿದ್ದಾರೆ. ಕಾಂಟ್ರೆಕ್ಟರ್ ಮೋಹನ ಚವ್ಹಾಣ ಸಬ್ ಕಾಂಟ್ರೆಕ್ಟ್ ಕೊಡುತ್ತಿದ್ದ, ಹಣ ನೀಡಿಲ್ಲವೆಂದು ಗ್ಯಾಂಗ್‌ವೊಂದು ಕ್ರೂಸರ್ ಮತ್ತು ಕಾರಿನಲ್ಲಿ ಮೋಹನ ಅವರ ಕಚೇರಿಯೊಳಗೆ ನುಗ್ಗಿ ಹೊರಗೆ ಎಳೆದುಕೊಂಡು, ಕಾರಿನಲ್ಲಿ ಬಲವಂತವಾಗಿ ಅವರನ್ನು ನೂಕಿ, ಕರೆದೊಯ್ದಿದ್ದರು. ಅಷ್ಟೇ ಅಲ್ದೆ ತಡೆಯಲು ಹೋದವರ ಮೇಲೆ ಹಲ್ಲೆ ನಡೆಸಿದ್ದೂ ಅಲ್ಲದೆ, ಮಹಿಳೆಯರನ್ನು ಸಹ ಎಳೆದಾಡಿದ್ದರು. ಈ ಕುರಿತು ಗೋಕುಲ ರೋಡ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿತ್ತು ಒಟ್ಟು ಇದುವರೆಗೆ 12 ಜನರ ಬಂಧನ ಮಾಡಲಾಗಿದೆ ಎಂದು ತಿಳಿದು ಬಂದಿದೆ.
bigtvnews | Hubli Dharwad News | Kannada News | Karnataka News Hubli News | News In Hubli | Local news

