Breaking News

ಯುವಕನ ಪಾಲಿಗೆ ಯಮನಾದ ಆತನೇ ಖರೀದಿಸಿದ ಹೊಸ ಬೈಕ್.

ಹರೀಶ್ ಎಂಬ ಯುವಕನು ಇಂಟರ್ಮೀಡಿಯೇಟ್ ಮುಗಿಸಿದ್ದು, ಪ್ರಸ್ತುತ ಕೆಲಸದ ಹುಡುಕಾಟದಲ್ಲಿದ್ದ. ಪೋಷಕರ ಮೇಲೆ ಹೊಸ ಬೈಕ್ ಖರೀದಿಸುವಂತೆ ಒತ್ತಡ ಹೇರುತ್ತಿದ್ದ. ಮಗನ ಆಸೆಗೆ ಮಣಿದು ದಸರಾದಂದು ಹೊಸ ಬೈಕ್ ತಂದು ಕೊಟ್ಟಿದ್ದಾರೆ. ಆದರೆ ಈ ಯುವಕನ ಖುಷಿಯೂ ಎರಡು ದಿನವು ಉಳಿಯಲಿಲ್ಲ. ಬೆಳಗ್ಗಿನ ವೇಳೆ ದ್ವಾರಕಾನಗರದಿಂದ ಸ್ನೇಹಿತನೊಂದಿಗೆ ಟಿಫನ್‌ಗೆಂದು ಹೋಗುತ್ತಿದ್ದ ವೇಳೆ ಅಪಘಾತ ಸಂಭವಿಸಿದೆ. ಬೈಕ್ ನಿಯಂತ್ರಣ ತಪ್ಪಿ ಡಿವೈಡರ್‌ಗೆ ಡಿಕ್ಕಿ ಹೊಡೆದ ಪರಿಣಾಮ ಹರೀಶ್ ಗಂಭೀರವಾಗಿ ಗಾಯಗೊಂಡಿದ್ದು, ಆ ಕೂಡಲೇ ಆಸ್ಪತ್ರೆಗೆ ಸಾಗಿಸಿದರೂ ಚಿಕಿತ್ಸೆ ಫಲಕಾರಿಯಾಗದೇ ಯುವಕ ಮೃತ ಪಟ್ಟಿದ್ದಾನೆ.

Share News

About BigTv News

Check Also

ಬೆತ್ತಲೆ ಕಾಮುಕನ ಅಟ್ಟಹಾಸ..! ಲೇಡೀಸ್ ಪಿಜಿಗಳೇ ಟಾರ್ಗೆಟ್..?

ಧಾರವಾಡದಲ್ಲಿ ಬೆತ್ತಲೆ ಕಾಮುಕನ ಅಟ್ಟಹಾಸ..! ಲೇಡೀಸ್ ಪಿಜಿಗಳೇ ಟಾರ್ಗೆಟ್…? 3 ತಿಂಗಳಿಂದ ಯುವತಿಯರಿಗೆ ಕಿರುಕುಳ ಆರೋಪ — ಸಿಸಿಟಿವಿಯಲ್ಲಿ ಬೆತ್ತಲೆ …

Leave a Reply

Your email address will not be published. Required fields are marked *