ಸೇಡಿನ ಕಿಚ್ಚಿಗೆ ವಿಜಯಪುರ ಜಿಲ್ಲೆಯ ಶಾಂತವಾಗಿದ್ದ ಕನ್ನೂರು ಗ್ರಾಮದಲ್ಲಿ ಭೀಕರ ಡಬಲ್ ಮರ್ಡರ್ ನಡೆದಿದೆ. ದೊಡ್ಡಪ್ಪನ ಹತ್ಯೆಗೆ ಪ್ರತೀಕಾರ ತೀರಿಸಿಕೊಳ್ಳಲು ಮುಂದಾದ ಇಬ್ಬರು ಸಹೋದರರು, ಹಂತಕರು ಎನ್ನಲಾದ ಕುಚುಕು ಗೆಳೆಯರನ್ನು ಕಲ್ಲುಗಳಿಂದ ಜಜ್ಜಿ ಭೀಕರವಾಗಿ ಕೊಲೆ ಮಾಡಿದ್ದಾರೆ.ಹತ್ಯೆಯ ನಂತರ, ಸೇಡಿನ ಸಂಕೇತವಾಗಿ ಮೃತದೇಹಗಳ ಪಕ್ಕದಲ್ಲೇ ಬಿಯರ್ ಬಾಟಲ್‌ಗಳನ್ನು ಇಟ್ಟು ಪರಾರಿಯಾಗಿದ್ದಾರೆ. ಈ ಭೀಕರ ದ್ವಂದ್ವ ಕೊಲೆ ಪ್ರಕರಣ ವಿಜಯಪುರ ಜಿಲ್ಲೆಯಾದ್ಯಂತ ಭೀತಿ ಹುಟ್ಟಿಸಿದೆ. ಕೃತ್ಯ ಎಸಗಿ ಪರಾರಿಯಾಗಲು ಯತ್ನಿಸಿದ ಇಬ್ಬರು ಹಂತಕರ ಪೈಕಿ ಒಬ್ಬನನ್ನು ಪೊಲೀಸರು ಕಾಲಿಗೆ ಗುಂಡು ಹಾರಿಸಿ ಬಂಧಿಸಿದ್ದಾರೆ.
bigtvnews | Hubli Dharwad News | Kannada News | Karnataka News Hubli News | News In Hubli | Local news

