Breaking News

ಲೋಕಸಭೆ ಚುನಾವಣೆಯಲ್ಲಿ ಗೆದ್ದ ಬಿಜೆಪಿಗೆ ಅಧಿಕಾರದ ಮದ ಏರಿದೆ,

ಲೋಕಸಭೆ ಚುನಾವಣೆಯಲ್ಲಿ ಗೆದ್ದ ಬಿಜೆಪಿಗೆ ಅಧಿಕಾರದ ಮದ ಏರಿದೆ, ಹಾಗಾಗಿ ಇಂತಹ ಅಸಭ್ಯ ಹೇಳಿಕೆಗಳನ್ನ ನೀಡುತ್ತಿದ್ದಾರೆಂದು ಗ್ರಾಮೀಣಾಭಿವೃದ್ದಿ ಸಚಿವ ಕೃಷ್ಣಬೈರೇಗೌಡ ಕೋಲಾರದಲ್ಲಿ ಹೇಳಿಕೆ ನೀಡಿದರು. ಕೈ ಕಡಿಯುವುದು, ತಲೆ ತೆಗೆಯುವುದು ಬಿಜೆಪಿ ಸಂಸ್ಕೃತಿಯನ್ನ ಬಿಂಬಿಸುತ್ತದೆ. ಮೇಲು ಕೀಳು ಎಂಬ ಭಾವನೆ ಅವರ ತಲೆಯಲ್ಲಿ ಹಾಗೆ ಉಳಿದಿದೆ. ಮನುಷ್ಯ ಜನ್ಮ ಸ್ವಾಭಾವಿಕವಾಗಿದ್ದು, ಹೀಗೆಲ್ಲ ಒಂದು ಸಮುದಾಯಕ್ಕೆ ನೋವಾಗುವ ರೀತಿ ಮಾತನಾಡಬಾರದು. ಸಂಸದೆ ಶೋಭಾ ಕರೆಂದ್ಲಾಜೆ ಅಸಭ್ಯ ಟ್ವಿಟ್ ಗೆ ಸಚಿವ ಕೃಷ್ಣ ಬೈರೇಗೌಡ ಖಡಕ್ ಟಾಂಗ್ ನೀಡಿದರು. ಪಕ್ಷೇತರ ಶಾಸಕರಿಗೆ ಸಚಿವ ಸ್ಥಾನ ನೀಡಿದ್ದು, ಎರಡು ಪಕ್ಷಗಳ ವರಿಷ್ಠರ ತೀರ್ಮಾನ. ಮುಂದಿನ ಸಂಪುಟ ಅಗತ್ಯ ಬಿದ್ದರೆ ವರಿಷ್ಠರ ತೀರ್ಮಾನದಂತೆ ಕಾಂಗ್ರೆಸ್ ಅತೃಪ್ತ, ಹಿರಿಯ ಶಾಸಕರಿಗೆ ಅವಕಾಶ ನೀಡುತ್ತಾರೆ. ಹಾಗೂ ಅವಶ್ಯಕತೆ ಬಿದ್ದರೆ ವರಿಷ್ಠರ ತೀರ್ಮಾನದಂತೆ ಕಾಂಗ್ರೆಸ್ ನ ಸಚಿವರು ತಮ್ಮ ಸ್ಥಾನ ತ್ಯಾಗ ಮಾಡಲು ಸಿದ್ದ ಎಂದರು.

Share News

About admin

Check Also

ಭೀಕರ ಅಪಘಾತ : ಒಂದೇ ಕುಟುಂಬದ ನಾಲ್ವರು ಸಾವು

ಗದಗ:-ಬೆಳ್ಳಂಬೆಳಗ್ಗೆ ನರಗುಂದ ತಾಲೂಕಿನ ಕೊಣ್ಣೂರ ಗ್ರಾಮದ ಹೊರವಲಯದಲ್ಲಿ ಸಾರಿಗೆ ಬಸ್- ಕಾರು ನಡುವೆ ಅಪಘಾತ ಸಂಭವಿಸಿ ಒಂದೇ ಕುಟುಂಬದ ನಾಲ್ವರು …

Leave a Reply

Your email address will not be published. Required fields are marked *