Breaking News

ವಿಚಾರಣೆ ವೇಳೆ ನನ್ನ ಮುದ್ದಿನ “ಗೂಸಿ” ಎಂದು ಕಣ್ಣೀರಿಟ್ಟ ಡಾಗ್ ಕಿಲ್ಲರ್ ಪುಷ್ಟಲತಾ!

ಲಿಫ್ಟ್ ನಲ್ಲಿ ಶ್ವಾನದ ಮೇಲೆ ಮಹಿಳೆ ಮಾರಣಾಂತಿಕ ಹಲ್ಲೆ
ಮಾಡಿದ ಕೇಸ್ ಗೆ ಸಂಬಂಧಪಟ್ಟಂತೆ ಪೊಲೀಸ್ ವಿಚಾರಣೆ ವೇಳೆ ಆರೋಪಿತೆ ಪುಷ್ಪಲತಾ ಕಣ್ಣೀರು ಹಾಕಿದ್ದಾಳೆ. ಗೂಸಿಯನ್ನ ( ಶ್ವಾನ) ನಾನು ತುಂಬಾ ಪ್ರೀತಿಯಿಂದ ನೋಡಿಕೊಳ್ತಿದ್ದೆ.ಎರಡು ತಿಂಗಳಿನಿಂದ ಗೂಸಿಗೆ ನಾನೇ ಊಟ ಮಾಡಿಸ್ತಿದ್ದೆ.ನಾನು ಹೇಳಿದಂತೆ ಗೂಸಿ ಕೇಳ್ತಿತ್ತು.ಆದರೆ ಎರಡು ಮೂರು ದಿನಗಳಿಂದ ನನ್ನ ಮಾತನ್ನ ಗೂಸಿ ಕೇಳ್ತಿರಲಿಲ್ಲ ಎಂದಿದ್ದಾಳೆ.ನನ್ನನ್ನು ನೋಡಿ ಇತ್ತೀಚೆಗೆ ಗೂಸಿ ಬೊಗಳಲು ಶುರು ಮಾಡಿತ್ತು. ಮೊನ್ನೆಯೂ ಸಹ ಲಿಫ್ಟ್ ಒಳಗೆ ಬರಲು ತುಂಬಾ ಹಠ ಮಾಡಿತ್ತು. ಒಂದೇ ಸಮ ಬೊಗಳಲು ಶುರು ಮಾಡಿತ್ತು.ಅದಕ್ಕೆ ಲಿಫ್ಟ್ ನಲ್ಲಿ ಗೂಸಿಯನ್ನ ಎತ್ತಿ ಬಿಸಾಡಿದೆ ಎಂದು ಪುಷ್ಪಲತಾ ಹೇಳಿದ್ದಾಳೆ. ಆ ಬಳಿಕ ಗೂಸಿ ಬೊಗಳೋದು ನಿಲ್ಲಿಸಿತು. ಆದ್ರೆ ಲಿಫ್ಟ್ ಹೊರಗೆ ಬಂದ್ಮೇಲೆ ಗೂಸಿ ಸತ್ತಿರೋದು ಗೊತ್ತಾಯಿತು ಎಂದಿದ್ದಾಳೆ.ಕಳೆದ ಕೆಲ ತಿಂಗಳಿನಿಂದ ಪುಷ್ಪಲತಾ ರಾಶಿಕಾ ಎಂಬುವವರ ಬಳಿ ಕೆಲಸಕ್ಕಿದ್ದಳು. ರಾಶಿಕಾ ಪುಷ್ಪಲತಾಳಿಗೆ 23 ಸಾವಿರ ಸಂಬಳ ನೀಡ್ತಿದ್ರು ಎನ್ನಲಾಗಿದೆ. ಈ ಘಟನೆ ನಂತರ ಸಿಸಿಟಿವಿ ಸಮೇತ ಬಾಗಲೂರು ಠಾಣೆಗೆ ರಾಶಿಕ ದೂರು ನೀಡಿದ್ದರು.ಸದ್ಯ ಶ್ವಾನದ ಮಾಲೀಕೆ ರಾಶಿಕ ದೂರಿನನ್ವಯ ಪುಷ್ಪಲತಾ ಬಂಧನವಾಗಿದೆ. ಮಾನಸಿಕ ಖಿನ್ನತೆಯಿಂದ ಆರೋಪಿತೆ ಬಳಲಿಳ್ತಿದ್ದಾಳ ಎಂಬ ಶಂಕೆಯನ್ನು ಪೊಲೀಸರು ವ್ಯಕ್ತಪಡಿಸಿದ್ದಾರೆ. ಸದ್ಯ ಪುಷ್ಪಲತಾಳನ್ನು ವೈದ್ಯಕೀಯ ತಪಾಸಣೆಗೆ ಒಳಪಡಿಸಲಾಗಿದೆ.

Share News

About BigTv News

Check Also

ಕೋಲಾರದಲ್ಲಿ ರೈತರು-ಅರಣ್ಯ ಇಲಾಖೆ ಮಧ್ಯೆ ಸಂಘರ್ಷ: ಸಿಬ್ಬಂದಿ ಮೇಲೆ ಮಚ್ಚಿನಿಂದ ಅಟ್ಯಾಕ್‌

ಕೋಲಾರ: ಜಿಲ್ಲೆಯ ಶ್ರೀನಿವಾಸಪುರ ತಾಲೂಕಿನ ಮಲ್ಲಂಪಲ್ಲಿ ಗ್ರಾಮದಲ್ಲಿ ಅರಣ್ಯ ಇಲಾಖೆ ಸಿಬ್ಬಂದಿ ಮೇಲೆ ಮಚ್ಚಿನಿಂದ ಹಲ್ಲೆ ನಡೆದಿದ್ದು, ಮೂವರು ಗಂಭೀರವಾಗಿ …

Leave a Reply

Your email address will not be published. Required fields are marked *