Breaking News

ಸಮಸ್ಯೆ ಹೇಳಿಕೊಳ್ಳಲು ಬಂದ ವ್ಯಕ್ತಿ ಮೇಲೆ ಕಾಂಗ್ರೆಸ್‌ ಶಾಸಕನಿಂದ ಹಲ್ಲೆ; ಸತ್ಯ ಬಾಯ್ಬಿಟ್ಟ ವ್ಯಕ್ತಿ

ಮೈಸೂರು: ಜಿಲ್ಲೆಯ ಕೆಆರ್‌ ನಗರ ವಿಧಾನಸಭಾ ಕ್ಷೇತ್ರದ ಕಾಂಗ್ರೆಸ್‌ ಶಾಸಕ ಡಿ ರವಿಶಂಕರ್‌ ವೇದಿಕೆ ಮೇಲೆ ಸಾರ್ವಜನಿಕರ ಕುಂದು ಕೊರತೆ ಕೇಳುತ್ತಿದ್ದಾಗ ವ್ಯಕ್ತಿಯೋರ್ವನ ಮೇಲೆ ಹಲ್ಲೆ ನಡೆಸಿದ್ದಾರೆ ಎಂಬ ಗಂಭೀರ ಆರೋಪ ಕೇಳಿಬಂದಿದೆ.ಆದರೆ ಘಟನೆಯಲ್ಲಿ ಹಲ್ಲೆಗೊಳಗಾಗಿದ್ದಾರೆ ಎನ್ನಲಾದ ವ್ಯಕ್ತಿ ಮಹಾದೇವ್‌ ಪ್ರತಿಕ್ರಿಯಿಸಿದ್ದು, ಶಾಸಕರು ತನ್ನ ಮೇಲೆ ಯಾವುದೇ ಹಲ್ಲೆ ಮಾಡಿಲ್ಲ, ಬದಲಾಗಿ ತನ್ನ ಬೆನ್ನು ತಟ್ಟಿ ಪಕ್ಕದಲ್ಲಿ ಕೂರಿಸಿದರು ಎಂದು ಹೇಳಿದ್ದಾರೆ. ವೇದಿಕೆ ಮೇಲೆ ಹಲವರು ಸಮಸ್ಯೆಗಳನ್ನು ಹೇಳಿಕೊಳ್ಳುತ್ತಿದ್ದರು. ಆಗ ನಾನು ಡೈರಿ ಸಮಸ್ಯೆ ಹೇಳಿಕೊಳ್ಳಲು ಮುಂದಾದೆ. ಎಲ್ಲರೂ ಒಟ್ಟಿಗೆ ಮಾತನಾಡುತ್ತಿದ್ದ ಕಾರಣ ರವಿಶಂಕರ್‌ ಅವರಿಗೆ ಗೊಂದಲ ಉಂಟಾಗಿ ಯಾವುದೂ ಸರಿಯಾಗಿ ಕೇಳಿಸುತ್ತಿರಲಿಲ್ಲ. ಹೀಗಾಗಿ ಅವರು ನನ್ನ ಬೆನ್ನಿಗೆ ತಟ್ಟಿ ಪಕ್ಕದಲ್ಲಿ ಕುಳಿತಿರು ಎಂದು ತಿಳಿಸಿದರು ಎಂದು ಮಹಾದೇವ್‌ ಸ್ಪಷ್ಟನೆ ನೀಡಿದ್ದಾರೆ. ಈ ಮೂಲಕ ಗಂಭೀರ ಆರೋಪವನ್ನು ತಳ್ಳಿಹಾಕಿದ್ದಾರೆ.

Share News

About BigTv News

Check Also

ಬೆಂಗಳೂರು: ಪಬ್‌ನಲ್ಲಿ ಲೈಟರ್ ಕೇಳಿ ಪರಿಚಯವಾದ ರಾಜಸ್ಥಾನದ ಯುವತಿಯ ಹೋಟೆಲ್‌ಗೆ ಕರೆದೊಯ್ದು ಅತ್ಯಾಚಾರ ಎಸಗಿದ ಆರೋಪಿಯ ಬಂಧನ

ಬೆಂಗಳೂರು: ರಾಜಸ್ಥಾನದ ಜೈಪುರದಿಂದ ಬೆಂಗಳೂರಿಗೆ ಬಂದಿದ್ದ ಯುವತಿಯೊಬ್ಬರಿಗೆ ಕೋರಮಂಗಲದ ಪಬ್‌ನಲ್ಲಿ ಸಮೀರ್ ಎಂಬಾತ ಪರಿಚಯವಾಗಿದ್ದಾನೆ. ಸಿಗರೇಟ್ ಸೇದಲು ಲೈಟರ್ ಕೇಳಿದಾಗ …

Leave a Reply

Your email address will not be published. Required fields are marked *